ಬೆಂಗಳೂರು,ಮಾರ್ಚ್,18,2022(www.justkannada.in): ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಹಾಸನದಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಮತಬ್ಯಾಂಕ್ ಗಾಗಿ ಇಂಥ ವಿಚಾರಗಳ ಚರ್ಚೆ ನಡೆಯುತ್ತಿದೆ ರಾಜ್ಯದ ಸಮಸ್ಯೆಗಳು ಸಾಕಷ್ಟಿವೆ. ಈ ಬಗ್ಗೆ ಸರ್ಕರ ಗಮನಹರಿಸಲಿ ಎಂದು ಟಾಂಗ್ ನೀಡಿದ್ದಾರೆ.
ಮಕ್ಕಳ ಭವಿಷ್ಯ ನಿರ್ಮಿಸುವ ರೀತಿ ವಿಚಾರಗಳಿರಬೇಕು. ಮಕ್ಕಳ ಬದುಕು ಕಟ್ಟಿಕೊಡುವುದಕ್ಕೆ ಸರ್ಕಾರ ಇರುವುದು. ಮಕ್ಕಳ ಭವಿಷ್ಯ ರೂಪಿಸುವ ವಿಚಾರ ಶಾಲೆಗಳಲ್ಲಿ ಇರಬೇಕು. ಆದರೆ ವೋಟ್ ಬ್ಯಾಂಕ್ ಗಾಗಿ ಈ ರೀತಿ ಚರ್ಚೆಗಳು ನಡೆಯುತ್ತಿದೆ. ಸರ್ಕಾರ ಇತರೆ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ ಎಂದು ಸಲಹೆ ನೀಡಿದರು.
ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಜನರ ಹೃದಯಕ್ಕೆ ಸಿನಿಮಾ ಹತ್ತಿರವಾಗುವಂತೆ ಮಾಡಲು ಭಾವನಾತ್ಮಕ ಟಚ್ ನೀಡುತ್ತಾರೆ. ಹತ್ಯಾಕಾಂಡಗಳು ಮಹಾಭಾರತ, ಕುರುಕ್ಷೇತ್ರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಸ್ವಾತಂತ್ರ್ಯ ಬಂದಾಗ, ದೇಶ ವಿಭಜನೆಯಂತಹ ಘಟನೆ ನಡೆದಾಗ 20 ಲಕ್ಷ ಕುಟುಂಬಗಳ ಬಲಿದಾನವಾಯಿತು. ಇಂತಹ ಚರಿತ್ರೆಗಳು ಮತ್ತೆ ಮುಂದುವರೆಯಬಾರದು ಎಂಬುದು ನನ್ನ ಅಭಿಪ್ರಾಯ ಎಂದರು.
Key words: Bhagavad Gita –text- Former CM -HD Kumaraswamy