ಬೆಂಗಳೂರು, ಮೇ 29, 2022 (www.justkannada.in): ನಿರ್ಮಾಪಕರಾದ ಭಾಮಾ ಹರೀಶ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ.
ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 64ನೇ ವರ್ಷದ ವಾರ್ಷಿಕ ಚುನಾವಣೆಯ ಫಲಿತಾಂಶ ಮಧ್ಯರಾತ್ರಿ 12 ಗಂಟೆಗೆ ಹೊರಬಿದ್ದಿದೆ.
ಚುನಾವಣೆಯಲ್ಲಿ ನಿರ್ಮಾಪಕರಾದ ಭಾಮಾ ಹರೀಶ್ ಮತ್ತು ಸಾರಾ ಗೋವಿಂದು ಬಣಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು.
ಕೊನೆಗೂ ಭಾಮಾ ಹರೀಶ್ ಬಣಕ್ಕೆ ಭರ್ಜರಿ ಜಯ ದೊರಕಿದ್ದು, ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಭಾಮಾ ಹರೀಶ್ ಆಯ್ಕೆಯಾಗಿದ್ದಾರೆ.
ಭಾಮಾ ಹರೀಶ್ ಮತ್ತು ಸಾರಾ ಗೋವಿಂದು ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ 410 ಮತಗಳ ಅಂತರದಿಂದ ಭಾಮಾ ಹರೀಶ್ ಜಯಭೇರಿ ಬಾರಿಸಿದ್ದಾರೆ. ಸಾರಾ ಗೋವಿಂದು 371 ಮತ ಗಳಿಸಿದರೆ, ಭಾಮಾ ಹರೀಶ್ 781 ಮತ ಪಡೆದರು.