ಬೆಂಗಳೂರು, ಏಪ್ರಿಲ್ 25, 2021 (www.justkannada.in):
ಭಾರತ್ ಬಯೋಟೆಕ್ ಕೊರೊನಾ ಲಸಿಕೆಗೆ ರಾಜ್ಯ ಸರ್ಕಾರಗಳಿಗೆ 600 ರೂ. ಪ್ರತಿ ಡೋಸ್ ಹಾಗೂ ಖಾಸಗಿ ಆಸ್ಪತ್ರೆಗಳಿಗೆ 1,200 ರೂ. ಪ್ರತಿ ಡೋಸ್ ಎಂದು ದರ ನಿಗದಿ ಮಾಡಲಾಗಿದೆ ಎಂದು ಭಾರತ್ ಬಯೋಟೆಕ್ ಪ್ರಕಟಿಸಿದೆ.
ಹೌದು. ದೇಶಿ ಕೊರೊನಾ ಲಸಿಕೆ ಭಾರತ್ ಬಯೋಟೆಕ್ ಹೊರ ತಂದಿರುವ ಕೋವ್ಯಾಕ್ಸಿನ್ ದರ ನಿಗದಿ ಮಾಡಲಾಗಿದೆ.
ಇಂಡಿಯನ್ ಮೆಡಿಕಲ್ ರಿಸರ್ಚ್ ಕೌನ್ಸಿಲ್ ಜೊತೆಗೂಡಿ ಭಾರತ್ ಬಯೋಟೆಕ್ ಉತ್ಪಾದಿಸಿರುವ ಕೋವ್ಯಾಕ್ಸಿನ್ ದರ ಲಭ್ಯ ಲಸಿಕೆಗಳಲ್ಲೇ ಹೆಚ್ಚಿನ ದರ ಹೊಂದಿದೆ.
ಈ ನಡುವೆ ರಫ್ತು ಮಾಡುವ ಲಸಿಕೆ ದರ 15 ರಿಂದ 20 ಡಾಲರ್ (ಅಂದಾಜು 1123 ರು ನಿಂದ 1,498ರು) ಎಂದು ನಿಗದಿ ಪಡಿಸಲಾಗಿದೆ.
ಭಾರತಕ್ಕೆ 170 ರಿಂದ 180 ಕೋಟಿ ಡೋಸ್ ಲಸಿಕೆ ಅಗತ್ಯವಿದೆ. ಸದ್ಯ 13. 81 ಕೋಟಿ ಲಸಿಕೆ ನೀಡಲಾಗಿದೆ. 2.10 ಕೋಟಿ ಮಂದಿ ಮಾತ್ರ ಎರಡು ಬಾರಿ ಡೋಸ್ ಪಡೆದುಕೊಂಡಿದ್ದಾರೆ.