ತುಮಕೂರು,ಅಕ್ಟೋಬರ್,8,2022(www.justkannada.in): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆ ರಾಜ್ಯದಲ್ಲಿ 7ನೇ ದಿನಕ್ಕೆ ಕಾಲಿಟ್ಟಿದೆ.
ತುಮಕೂರಿನ ತುರುವೆಕೆರೆಯ ಮಾಯಸಂದ್ರದಿಂದ ಇಂದು ಭಾರತ್ ಜೋಡೋ ಪಾದಯಾತ್ರೆ ಪ್ರಾರಂಭವಾಗಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ರಾಜ್ಯದ ನಾಯಕರು ಕಾರ್ಯಕರ್ತರು ಹೆಜ್ಜೆ ಹಾಕಿದ್ದಾರೆ.
ರಾಹುಲ್ ಗಾಂಧಿ ಜೊತೆ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್, ಕೆಸಿ ವೇಣುಗೋಪಾಲ್, ಶ್ರೀನಿವಾಸ್, ರಾಜಣ್ಣ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಸೇರಿದಂತೆ ಹಲವರು ಹೆಜ್ಜೆ ಹಾಕುತ್ತಿದ್ದಾರೆ.ಪಾದಯಾತ್ರೆ ನಡುವೆ ಗಣೇಶ ದೇವಸ್ಥಾನದ ಅರ್ಚಕರು ರಾಹುಲ್ ಗಾಂಧಿಗೆ ತಿಲಕವಿಟ್ಟು ಆಶಿರ್ವಾದ ಮಾಡಿದರು.
ಭಾರತ್ ಜೋಡೋ ಯಾತ್ರೆಯಲ್ಲಿ ಟಿಕೇಟ್ ಆಕಾಂಕ್ಷಿಗಳು, ಅಸಮಾಧಾನಿತ ನಾಯಕರು ಕೂಡ ಭಾಗಿಯಾಗಿದ್ದಾರೆ. ಪಾದಯಾತ್ರೆಯಲ್ಲಿ ಅಸಮಾಧಾನಿತ ನಾಯಕರು ಸಹ ಭಾಗಿಯಾಗಿದ್ದಾರೆ. ಎಸ್.ಆರ್.ಪಾಟೀಲ್ ನಿನ್ನೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇಂದು ಎಂ.ಆರ್.ಸೀತಾರಾಮ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಪಕ್ಷ ತೊರೆಯುವ ಬಗ್ಗೆ ಚರ್ಚಿಸಿದ್ದ ಸೀತಾರಾಮ್, S.R.ಪಾಟೀಲ್ ಪಾದಯಾತ್ರೆಯಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ.
Key words: Bharat Jodo yathre- Tumkur-Rahul Gandhi-congress leaders