ಬೆಂಗಳೂರು,ಏಪ್ರಿಲ್,14,2021(www.justkannada.in) : ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ಸಮಾಜದಲ್ಲಿ ಸ್ವಾತಂತ್ರ್ಯ, ಭ್ರಾತೃತ್ವ, ಸಮಾನತೆಗಳನ್ನು ಪ್ರತಿಪಾದಿಸುವ ಜೊತೆಗೆ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಹೋರಾಡಿದ ಡಾ.ಅಂಬೇಡ್ಕರ್ ಅವರ ಸಾಧನೆ, ದೇಶ ನಿರ್ಮಾಣದಲ್ಲಿ ಅವರ ಕೊಡುಗೆ ಚರಿತ್ರಾರ್ಹವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
ದೀನ ದಲಿತರ ಬಂಧು, ದುರ್ಬಲರ ಆಶಾಕಿರಣ ಬಾಬಾ ಸಾಹೇಬ್ ಅಂಬೇಡ್ಕರ್
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಭವಿಷ್ಯದ ಭಾರತದ ಕನಸು ಕಂಡ, ಭವ್ಯ ಭಾರತಕ್ಕಾಗಿ ಶ್ರಮಿಸಿದ ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮಜಯಂತಿಯ ದಿನವಾದ ಇಂದು ಅವರನ್ನು ಮನಃಪೂರ್ವಕವಾಗಿ ಸ್ಮರಿಸುತ್ತೇನೆ ಎಂದಿದ್ದಾರೆ. ದೀನ ದಲಿತರ ಬಂಧು, ದುರ್ಬಲರ ಆಶಾಕಿರಣ” ಎಂಬ ಬಿರುದು ಬಾವಲಿಗಳು ಎಂದೆಂದಿಗೂ ಈ ಮಹಾನಾಯಕನಿಗೇ ಸೀಮಿತ ಎಂದು ತಿಳಿಸಿದ್ದಾರೆ.
ಬಾಬಾ ಸಾಹೇಬರ ಹುಟ್ಟು ನಮ್ಮೆಲ್ಲರ ಹುಟ್ಟನ್ನು ಅರ್ಥಪೂರ್ಣಗೊಳಿಸಿತು
ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ, ಬಾಬಾ ಸಾಹೇಬರ ಹುಟ್ಟು ನಮ್ಮೆಲ್ಲರ ಹುಟ್ಟನ್ನು ಅರ್ಥಪೂರ್ಣಗೊಳಿಸಿತು. ನಮಗೆ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಘನತೆಯ ಬದುಕು ಸಿಕ್ತು. ಬಾಬಾಸಾಹೇಬರ ಹುಟ್ಟುಹಬ್ಬವನ್ನು ಅವರ ಚಿಂತನೆಯ ಅರಿವಿನೊಂದಿಗೆ ನಮ್ಮೆಲ್ಲರ ಹುಟ್ಟುಹಬ್ಬವಾಗಿ ಆಚರಿಸೋಣ. ಅಂಬೇಡ್ಕರ್ ಜಯಂತಿಯ ಶುಭಾಶಯಗಳು ಎಂದು ತಿಳಿಸಿದ್ದಾರೆ.
ENGLISH SUMMARY….
Dignitaries including CM BSY wishes citizens on the occasion of Bharatratna Dr. B.R. Ambedkar Jayanthi
Bengaluru, Apr. 14, 2021 (www.justkannada.in): Several dignitaries including Chief Minister B.S. Yedyurappa have wished the citizens of the state on the occasion of Bharat Ratna Dr. B.R. Ambedkar Jayanthi.
In his tweet, the Chief Minister mentioned that Dr. Ambedkar’s achievement and his contribution in nation-building, independence, and establishing brotherhood and equality in the society was immense.
Former Chief Ministers H.D. Kumaraswamy, Siddaramaiah, and other leaders also offered their obeisance to the architect of the Indian constitution.
Keywords: Dr. B.R. Ambedkar Jayanthi/ dignitaries wish people
key words : Bharat Ratna-Dr.Baba Saheb Ambedkar Jayanti-Former CM- including-CM BSY-greeted