ಮೈಸೂರು,ಜೂ,15,2020(www.justkannada.in): ಜನಸ್ನೇಹಿ ಕೇಂದ್ರದಲ್ಲಿ ಭೋವಿ, ಕೊರಮ, ಬಂಜಾರ, ಲಂಬಾನಿ ಜಮಾಂಗಗಳಿಗೆ ಜಾತಿ ಪ್ರಮಾಣ ಪತ್ರ ನೀಡದೆ ತೊಂದರೆ ಕೊಡುತ್ತಿದ್ದಾರೆ ಎಂದು ಭೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮ್ ಆರೋಪ ಮಾಡಿದರು.
ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮ್, ಜನಸ್ನೇಹಿ ಕೇಂದ್ರದಲ್ಲಿ ಭೋವಿ, ಕೊರಮ, ಬಂಜಾರ, ಲಂಬಾನಿ ಜಮಾಂಗಗಳಿಗೆ ಜಾತಿ ಪ್ರಮಾಣ ಪತ್ರ ನೀಡದೆ ತೊಂದರೆ ಕೊಡುತ್ತಿದ್ದಾರೆ. ವ್ಯವಸ್ಥಿವಾಗಿ ಈ ಸಮುದಾಯಗಳನ್ನ ಪರಿಶಿಷ್ಟ ಜಾತಿಯಿಂದ ತೆಗೆದುಹಾಕುವ ಹುನ್ನಾರ ನಡೆಯುತ್ತಿದೆ. ಮೈಸೂರು ತಾಲೂಕು ಜನಸ್ನೇಹಿ ಕೇಂದ್ರದ ಆಪರೇಟರ್ ನಮಗೆ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ತೆಗೆದುಕೊಳ್ಳುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಮೀಸಲಾತಿ ಪಟ್ಟಿಯಿಂದ ಕೈಬಿಡುವುದು ಲೋಕಸಭೆಯಲ್ಲಿ ಆಗಬೇಕು. ಆದರೆ ತಾಲ್ಲೂಕು ಕಚೇರಿಗಳಲ್ಲಿ ಈಗಲೇ ಅರ್ಜಿ ತೆಗೆದುಕೊಳ್ಳದೆ ನಮಗೆ ಅವಮಾನ ಮಾಡುತ್ತಿದೆ. ತಹಶೀಲ್ದಾರ್ ಆದೇಶ ನೀಡದಿದ್ದರೂ ಆಪರೇಟರ್ ಗಳು ಈ ರೀತಿ ತೊಂದರೆ ಕೊಡುತ್ತಿದ್ದಾರೆ. ಇದು ಅಲ್ಲಿ ಇರುವ ಅಧಿಕಾರಗಳ ಷಡ್ಯಂತ್ರವಾಗಿದೆ. ಅಂತಹ ಅಧಿಕಾರಿಗಳನ್ನ ಅಮಾನತು ಮಾಡಬೇಕೆಂದು ಒತ್ತಾಯ ಮಾಡಿದರು.
Key words: Bhovi- Community-caste certificate-mysore