ಬೆಂಗಳೂರು, ಫೆಬ್ರವರಿ 04, 2020 (www.justkannada.in): ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯಲ್ಲಿ ವಿಜೇತರಾಗಿ 60 ಲಕ್ಷ ರೂ. ಬಹುಮಾನ ಮೊತ್ತ ಗೆದ್ದರೂ ಶೈನ್ ಶೆಟ್ಟಿ ಮತ್ತೆ ತಮ್ಮ ವೃತ್ತಿ ಮುಂದುವರಿಸಿದ್ದಾರೆ.
ಬಿಗ್ ಬಾಸ್ ಗೆ ಬರುವ ಮೊದಲು ನಟ ಶೈನ್ ಜೀವನೋಪಾಯಕ್ಕಾಗಿ ಗಲ್ಲಿ ಕಿಚನ್ ಎಂಬ ಹೋಟೆಲ್ ಆರಂಭಿಸಿದ್ದರು. ಶೈನ್ ಬಿಗ್ ಬಾಸ್ ಗೆ ಹೋದ ಮೇಲೆ ಅವರ ಹೋಟೆಲ್ ಮತ್ತಷ್ಟು ಜನಪ್ರಿಯವಾಗಿತ್ತು.
ಇದೀಗ ಬಿಗ್ ಬಾಸ್ ವಿಜೇತರಾದ ಮರುದಿನವೇ ತಮ್ಮ ಗಲ್ಲಿ ಕಿಚನ್ ಗೆ ಬಂದ ಶೈನ್ ಅಭಿಮಾನಿಗಳೊಂದಿಗೆ ಬೆರೆತಿದ್ದಾರೆ. ಈ ಮೊದಲಿನಂತೇ ಹೋಟೆಲ್ ನಲ್ಲಿ ತಿಂಡಿ ಪೂರೈಸುವ ಕೆಲಸ ಮಾಡಿದರೂ ಈ ಬಾರಿ ಅಭಿಮಾನಿಗಳು ಅವರನ್ನು ಸೆಲ್ಫೀಗಾಗಿ ಮುಗಿಬಿದ್ದಿದ್ದಾರೆ.