BIG BREAKING NEWS : ಕರೋನಾ ವೈರಸ್ ಕತೃ ಚೀನಾ, ಸದ್ಯದಲ್ಲೇ ಭಾರತದ ಮೇಲೆ ಮತ್ತೊಂದು VIRUS ದಾಳಿಗೆ ಸಿದ್ಧತೆ. ಕೇಂದ್ರದ ಎಚ್ಚರಿಕೆ.

 

ಬೆಂಗಳೂರು, ಜೂ.23, 2020 : (www.justkannada.in news) : ಕರೋನಾ ವೈರಾಣು ದಾಳಿಯಿಂದ ಚೇತರಿಸಿಕೊಳ್ಳುವ ಮುನ್ನವೇ ಭಾರತೀಯರಿಗೆ ಮತ್ತೊಂದು ತಲೆ ನೋವು ಶುರುವಾಗುವ ಆತಂಕ ಎದುರಾಗಿದೆ.

ಭಾರತದ ಮೇಲೆ ಸೈಬರ್ ಅಟ್ಯಾಕ್ ನಡೆಸಲು ಚೀನಾ ಉದ್ದೇಶಿಸಿದೆ ಎಂಬ ಅಂಶವನ್ನು ಕೇಂದ್ರ ಸರಕಾರ ಬಹಿರಂಗ ಪಡಿಸಿದೆ. ಈ ಸಂಬಂಧ ಹೇಳಿಕೆ ನೀಡಿರುವ ಕೇಂದ್ರದ ಗೃಹ ಸಚಿವಾಲಯದ ಅಡಿಯಲ್ಲಿನ ‘ ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಫೋರ್ಸ್ ‘ ನ ಡೈರಕ್ಟರೇಟ್ ಜನರಲ್ ಜನತೆಗೆ ಎಚ್ಚರದಿಂದ ಇರುವಂತೆ ತಿಳಿಸಿದೆ.

ಭಾರತೀಯರ ಇ-ಮೇಲ್ ಗಳನ್ನು ಸಾಮೂಹಿಕವಾಗಿ ಹ್ಯಾಕ್ ಮಾಡುವ ಮೂಲಕ ದತ್ತಾಂಶ ಕಳ್ಳತನಕ್ಕೆ ಚೀನಾ ಸೇನೆ ಮುಂದಾಗಿದೆ ಎನ್ನಲಾಗಿದೆ. ಈ ಸಂಬಂಧ ಕೇಂದ್ರ ಸರಕಾರ ‘ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಮ್ ‘ ನ ( Computer Emergency Response Team-India ) ಹೇಳಿಕೆ ಉಲ್ಲೇಖಿಸಿ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.

ಕೋವಿಡ್ ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡು, ಕೋವಿಡ್ ಉಚಿತ ಪರೀಕ್ಷೆ ಎಂಬ ವಿಷಯ ದಲ್ಲಿ ncov2019@gov.in ಎಂಬ ಇ-ಮೇಲ್ ಐಡಿಯಿಂದ ಮೇಲ್ ಬರಬಹುದು. ಆದ್ದರಿಂದ ಈ ಐಡಿಯಿಂದ ಬರುವ ಮೇಲ್ ಗಳನ್ನು ಹಾಗೂ ಅಪರಿಚಿತರ ಇ-ಮೇಲ್ ಐಡಿಗಳಿಂದ ಬರುವ ಸಂದೇಶಗಳನ್ನು ತೆರೆಯದಂತೆ ಎಚ್ಚರಿಕೆ ನೀಡಿದೆ.

CYBER ALERT- MINISTRY OF HOME AFFAIRS-Computer Emergency Response Team-cyber offensive attack- from the -Chinese Army.

CYBER ALERT- MINISTRY OF HOME AFFAIRS-Computer Emergency Response Team-cyber offensive attack- from the -Chinese Army.

 

 

 

 

 

 

 

ಇ-ಮೇಲ್ ಕ್ಲಿಕ್ಕಿಸಿದ್ರೆ ಏನಾಗುತ್ತೆ..

ಸೈಬರ್ ಅಟ್ಯಾಕ್ ಮಾಡುವ ಉದ್ದೇಶದಿಂದಲೇ ಇ-ಮೇಲ್ ಗಳನ್ನು ಕಳುಹಿಸುವವರು ಇಲ್ಲಿನ ನೆಟ್ ಬಳಕೆದಾರರ ದಂತ್ತಾಶವನ್ನು ದುರುಪಯೋಗ ಮಾಡಿಕೊಳ್ಳಬಹುದು. ಅಥವಾ ಫಿಶ್ಶಿಂಗ್ ವೆಬ್ ಸೈಟ್ ಗೆ (ನಕಲಿ ವೆಬ್ ಸೈಟ್ ) ಸಂಪರ್ಕ ಕಲ್ಪಿಸಿ ಮೋಸಗೊಳಿಸಬಹುದು.

ಉದಾಹರಣೆಗೆ ಖಾತೆ ಹೊಂದಿರುವ ಬ್ಯಾಂಕ್ ನ ನಕಲಿ ವೆಬ್ ಸೈಟ್ ಸೃಷ್ಠಿಸಿ ಅದರಲ್ಲಿ ನಮ್ಮ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು. ಆದ್ದರಿಂದ ಅನಾಮಿಕ ವ್ಯಕ್ತಿಗಳ, ಅಪರಿಚಿತರ ಇ-ಮೇಲ್ ಗಳನ್ನು ಕ್ಲಿಕ್ ಮಾಡದೇ ಇರುವುದು ಸೂಕ್ತ ಎಂದು ಅಭಿಪ್ರಾಯ ಪಡುತ್ತಾರೆ ಬೆಂಗಳೂರಿನ ಸೈಬರ್ ಕ್ರೈಮ್ ಟೆಕ್ಕಿ ಚಂದನ್ ವೀರಭದ್ರ.

 

ooooo

KEY WORDS : CYBER ALERT- MINISTRY OF HOME AFFAIRS-Computer Emergency Response Team-cyber offensive attack- from the -Chinese Army.

 

ENGLISH SUMMARY :

MINISTRY OF HOME AFFAIRS. No.B-32099/4/CYBER ALERT/EDP CELL/39741/ 20201265 E)
CYBER ALERT.

CYBER ALERT- MINISTRY OF HOME AFFAIRS-Computer Emergency Response Team-cyber offensive attack- from the -Chinese Army.

that Computer Emergency Response Team-India(CERT-In) has issued an advisory regarding a potential cyber offensive attack from the Chinese Army. In the guise of a Free Covid-19 Test, Chinese cyber warriors could be carrying out a massive phishing attack
ncov2019@gov.in*. Beware of Malicious Phishing E-mails/ SMS. Watch out for IDs like Messages on Social Media inciting you to provide personal and financial information. Key Points i Phishing campaign is expected to impersonate government agencies, departments.