ಬೆಂಗಳೂರು,ಜನವರಿ,21,2021(www.justkannada.in): . ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ನಟಿ ರಾಗಿಣಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದಂತ ನಟಿ ರಾಗಿಣಿಗೆ ಕೊನೆಗೂ ಸುಪ್ರೀಂ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ. ಈ ಮೂಲಕ 140 ದಿನಗಳಿಂದ ಜೈಲಿನಲ್ಲಿದ್ದ ನಟಿ ರಾಗಿಣಿಗೆ ಬಿಗ್ ರಿಲೀಫ್ ಸಿಕ್ಕಂತೆ ಆಗಿದೆ.
ಸೆಪ್ಟಂಬರ್ 4 2020 ರಂದು ನಟಿ ರಾಗಿಣಿ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಬಳಿಕ ನಟಿ ರಾಗಿಣಿ ಜಾಮೀನು ಕೋರಿ ಸಲ್ಲಿಸಿದ್ಧ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕೊನೆಗೂ ಜಾಮೀನು ಮಂಜೂರು ಮಾಡಿದೆ.
ENGLISH SUMMARY…
Big relief for actor Ragini: SC grants bail
Bengaluru, Jan, 21, 2021 (www.justkannada.in): The Hon’ble Supreme Court has granted bail to sandalwood actor Ragini, who was in jail on drug peddling charges.
Ragini has been granted bail after spending 140 days in jail. She was taken imprisoned on Sept. 4, 2020, on drug peddling charges and was kept at the Parapana Agrahara jail. She had submitted an application at the High Court seeking bail, following which she approached the Hon’ble Supreme Court. She has been granted bail at last.
Keywords: Actor Ragini/ Supreme Court/ bail
Key words: Big relief – actress- Ragini Dwivedi-Bail granted – Supreme Court.