ಕಲ್ಬುರ್ಗಿ,ಅಕ್ಟೋಬರ್,13,2021(www.justkannada.in): ಕೇಂದ್ರ ಸರ್ಕಾರ ರಾಜ್ಯಕ್ಕೆ ಜಿಎಸ್ ಟಿ ಪರಿಹಾರ ಹಣವನ್ನೇ ಕೊಟ್ಟಿಲ್ಲ. ಕಳೆದ ವರ್ಷವೂ ಕೊಟ್ಟಿಲ್ಲ. ಈ ವರ್ಷವೂ ಕೊಟ್ಟಿಲ್ಲ. ಮೋದಿ ಪ್ರಧಾನಿಯಾದ ಬಳಿಕ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪಿಸಿದರು.
ಕಲ್ಬುರ್ಗಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿದ್ಧರಾಮಯ್ಯ, ಜಿಎಸ್ ಟಿ ಪರಿಹಾರ ಹಣವನ್ನ ಕೇಳಿದ್ರೆ. ಬೇಕಿದ್ದರೇ ಸಾಲ ಮಾಡಿ ಅಂತಾರೆ . ಕೇಂದ್ರ ನಮ್ಮ ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಪರಿಹಾರ ಕೊಟ್ಟಿಲ್ಲ. ನಮ್ಮ ಜಿಎಸ್ ಟಿ ಹಣದ ಪಾಲು ಕೂಡ ಕಡಿಮೆ ಮಾಡಿದ್ದಾರೆ. ಈ ಮೂಲಕ ದೊಡ್ಡ ಅನ್ಯಾಯ ಮಾಡಿದ್ದಾರೆ. ರಾಜ್ಯದ ಪಾಲು ಕಡಿಮೆಯಾಗಲು ಯಾರು ಕಾರಣ. ಪ್ರಧಾನಿ ಮೋದಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಕಾರಣ ಎಂದು ಕಿಡಿಕಾರಿದರು.
ಹಾಗೆಯೇ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಸಿದ್ಧರಾಮಯ್ಯ,2019ರ ಪರಿಹಾರದ ಹಣವನ್ನೇ ಇನ್ನು ಕೊಟ್ಟುಲ್ಲ ಈಗಿರುವ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕಲಬುರ್ಗಿಯಲ್ಲಿ 45 ಹಳ್ಳಿಗಳಲ್ಲಿ ಭೂಕಂಪನದ ಅನುಭವವಾಗಿದೆ. ಈವರೆಗೆ ಒಬ್ಬ ಜನಪ್ರತಿನಿಧಿಯು ಭೇಟಿ ನೀಡಿಲ್ಲ. ಶೇ.75 ರಷ್ಟು ಜನ ಗೂಳೆ ಹೋಗುತ್ತಿದ್ದಾರೆ. ನಾನು ಹೇಳಿದ ಬಳಿಕ ಕ್ರಮ ಕೈಗೊಳ್ಳುವುದಾಗಿ ಸಿಎಂ ಬೊಮ್ಮಾಯಿ, ಸಚಿವ ಆರ್.ಅಶೋಕ್ ಹೇಳಿದ್ದಾರೆ. ನಾನು ಗ್ರಾಮಕ್ಕೆ ಭೇಟಿ ನೀಡಿದಾಗ ಭೂಕಂಪನದ ಅನುಭವಾಗಿದೆ. ‘ಗ್ರಾಮದ ಜನರು ಬೀದಿಗಳಲ್ಲಿ ವಾಸ ಮಾಡುತ್ತಿದ್ದಾರೆ. ಇವರಿಗೆ ವ್ಯವಸ್ಥೆ ಮಾಡಬೇಕಲ್ಲವೇ ಎಂದು ಪ್ರಶ್ನಿಸಿದರು.
Key words: biggest -injustice – Karnataka –afte-r Modi –became- PM-Former CM- Siddaramaiah
ENGLISH SUMMARY…..
Karnataka has faced huge injustice after Modi came to power: Former CM Siddaramaiah alleges
Kalaburagi, October 13, 2021 (www.justkannada.in): “The Government of India has not given GST relief money to Karnataka at all. Last year also we didn’t receive, this year also we didn’t get. Karnataka has faced utmost injustice after Modi came to power,” opined former Chief Minister Siddaramaiah.
Speaking to the media persons at Kalaburagi today, Siddaramaiah said if the Govt. of Karnataka asks GST amount, the Govt. of India says take a loan! They have not given us our share of the GST amount at all. In fact, our share has been reduced. This way our state is facing a lot of injustice. Who is the reason for this? Isn’t it Prime Minister Modi, Finance Minister Nirmala Sitharaman, former Chief Minister B. S. Yedyurappa, and Chief Minister Basavaraj Bommai?.”
“The government has not released the 2019 compensation amount at all till now. The present government is not responding to the farmers’ problems at all. About 45 villages in Kalaburagi district have experienced an earthquake recently. But not even one elected representative has visited till now. More than 75% of the people here are migrating. After I explained it, Chief Minister Basavaraj Bommai and Revenue Minister R. Ashok said that they will look into the matter. The people have experienced the feeling of an earthquake when I visited. People are living on roads, isn’t it the duty of the government to make alternate arrangements,? he questioned.
Keywords: Former CM Siddaramaiah/ Kalaburagi/ injustice/ Govt. of India/ PM Modi