ಮೈಸೂರು,ಅಕ್ಟೋಬರ್,23,2020(www.justkannada.in): ಬಿಹಾರ ಚುನಾವಣೆಗೆ ನಿನ್ನೆಯಷ್ಟೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಉಚಿತ ಕೊರೋನಾ ಲಸಿಕೆ ನೀಡುವ ಭರವಸೆ ನೀಡಿದೆ. ಈ ಬೆನ್ನಲ್ಲೆ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಸಹ ತಮಿಳುನಾಡಿನ ಪ್ರತಿಯೊಬ್ಬರಿಗೂ ಕೊರೋನಾ ಲಸಿಕೆ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದೀಗ ಇದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ.
ಬಿಹಾರದಲ್ಲಿ ಪ್ರಣಾಳಿಕೆ ಬಿಡುಗಡೆ ಕೊರೊನಾ ಲಸಿಕೆ ಉಚಿತ ಕುರಿತು ಭರವಸೆ ವಿಚಾರ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ವೋಟ್ ಹಾಕಿ ಗೆಲ್ಲಿಸಿದ್ರೆ ಲಸಿಕೆ ಕೊಡ್ತೀರಾ ಸರಿ. ಸೋಲಿಸಿಬಿಟ್ಟರೆ ಜನರನ್ನ ಸಾಯಿಸಿ ಬಿಡ್ತೀರಾ..? ಎಂದು ಪ್ರಶ್ನಿಸಿದ್ದಾರೆ.
ಕೊರೋನಾ ವಿಚಾರವನ್ನ ರಾಜಕೀಯಕ್ಕೆ ತರಬೇಡಿ. ವೋಟ್ ಹಾಕಿ ಗೆಲ್ಲಿಸಿದ್ರೆ ಲಸಿಕೆ ಕೊಡ್ತೀರಾ ಸರಿ. ಸೋಲಿಸಿಬಿಟ್ಟರೆ ಜನರನ್ನ ಸಾಯಿಸಿ ಬಿಡ್ತಿರಾ? ಯಾವುದೇ ಪಕ್ಷವಾಗಲಿ ಕೊರೋನಾ ವಿಚಾರ ರಾಜಕೀಯ ಚರ್ಚೆಗೆ ಬಳಸಿಕೊಳ್ಳಬಾರದು. ಇದನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
Key words: bihar-election- Manifesto- corona vaccine-free-MLC-H.Vishwanath -condemns