ಜನ ಕಲ್ಯಾಣ ಸಮಾವೇಶ: ಮೈಸೂರಿನಲ್ಲಿ ಬೃಹತ್ ಪ್ರಚಾರಾಂದೋಲನ ಬೈಕ್ ರ್ಯಾಲಿ

ಮೈಸೂರು,ಡಿಸೆಂಬರ್ ,4,2024 (www.justkannada.in):  ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ನಿಂದ ಬೃಹತ್ ಸ್ವಾಭಿಮಾನಿ ಸಮಾವೇಶ ಮತ್ತು ಜನಕಲ್ಯಾಣ ಸಮಾವೇಶ ಜರುಗಲಿದ್ದು ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬೃಹತ್ ಪ್ರಚಾರಾಂದೋಲನ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.

ಮಾಜಿ ಶಾಸಕ ಎಂ ಕೆ ಸೋಮಶೇಖರ್ ಅವರ ನೇತೃತ್ವದಲ್ಲಿ  ಸಮಾವೇಶಕ್ಕೆ ಆಹ್ವಾನಿಸುವ ದೃಷ್ಟಿಯಿಂದ ಬೃಹತ್ ಜನಾಂದೋಲನ ಬೈಕ್ ರ್ಯಾಲಿಯನ್ನು ಮೈಸೂರಿನ ವಿದ್ಯಾರಣ್ಯಪುರಂನ ಚಾಮುಂಡಿವನದ ಬಳಿ ಚಾಲನೆ ನೀಡಲಾಯಿತು.

ಬೈಕ್ ರ್ಯಾಲಿ ವಿದ್ಯಾರಣ್ಯಪುರಂನ ಚಾಮುಂಡಿ ವನದಿಂದ ಪ್ರಾರಂಭವಾಗಿ ಅಶೋಕ್ ಪುರಂ, ರಾಮಸ್ವಾಮಿ ವೃತ್ತ, ಶಾಂತಲಾ ಸಿಗ್ನಲ್, ಸಿದ್ದಪ್ಪ ಚೌಕ, ನಂಜುಮಳಿಗೆ, 101 ಗಣಪತಿ ದೇವಸ್ಥಾನ, ಅಗ್ರಹಾರ, ರಾಮಾನುಜ ರಸ್ತೆ, ಕನಕಗಿರಿಯಲ್ಲಿ ಮುಕ್ತಾಯಗೊಂಡಿತು. 300ಕ್ಕೂ ಹೆಚ್ಚು ಬೈಕ್ ಗಳಲ್ಲಿ ಯುವಕರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಸಾಧನೆಗಳು ಮತ್ತು ಘೋಷಣೆಗಳನ್ನು ಕೂಗಿ ಸಾಗುವ ಮೂಲಕ ಸಾರ್ವಜನಿಕರನ್ನು ಆಹ್ವಾನಿಸಿದರು.

ಯತ್ನಾಳ್ ಮಾತು ಕೇಳದಿದ್ರೆ ಕ್ರಮ ಆಗಲೇಬೇಕು- ಮಾಜಿ ಸಚಿವ ಅರಗ ಜ್ಞಾನೇಂದ್ರ ಆಗ್ರಹ

ಈ ವೇಳೆ  ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್, ಶ್ರೀಧರ್, ಪಾಲಿಕೆ ಸದಸ್ಯರಾದ ಜೆ.ಗೋಪಿ,ಆರ್ ಹೆಚ್.ಕುಮಾರ್, ನಿರಾಲ್ ಶಾ, ಜೋಗಿ ಮಹೇಶ್, ಮಂಜು, ರಮೇಶ್, ರಾಜು, ವಿಶ್ವ, ಗುಣಶೇಖರ್, ಮಹ್ಮದ್ ಫಾರೂಖ್, ರಾಕೇಶ್, ಮಹೇಂದ್ರ ಗೌಡ, ಅಬ್ರಾರ್, ವೀಣಾ, ಭವ್ಯ, ಚಂದ್ರಕಲಾ, ವಿನಯ್ ಕುಮಾರ್, ಡೈರಿ ವೆಂಕಟೇಶ್, ಎಂ.ಕೆ.ಅಶೋಕ್, ಕುಮಾರ್ (ಕುಮ್ಮಿ)ಮಧುರಾಜ್ ,ಲಖನ್, ರವೀಶ್,ಜಾನಿ ಮತ್ತಿತರರು ಉಪಸ್ಥಿತರಿದ್ದರು.

Key words: Jan Kalyan Samavesha, bike rally ,  Mysore