ಸಿದ್ಧರಾಮಯ್ಯ ಅವಧಿಯಲ್ಲೇ ಬಿಲ್ ರೆಡಿಯಾಗಿತ್ತು: ಆ ಬಿಲ್ ಗೆ ಸ್ವಲ್ಪ ಬದಲಾವಣೆ ತಂದಿದ್ದೇವೆ- ಕಂದಾಯ ಸಚಿವ ಆರ್.ಅಶೋಕ್.

ಬೆಳಗಾವಿ,ಡಿಸೆಂಬರ್,23,2021(www.justkannada.in):  ರಾಜ್ಯ ಬಿಜೆಪಿ ಸರ್ಕಾರ ಜಾರಿ ಮಾಡಲು ಹೊರಡಿಸಿರುವ ಮತಾಂತರ ನಿಷೇಧ ಕಾಯ್ದೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗುತ್ತಿದ್ದು ಈ ಮಧ್ಯೆ ಸಿದ್ಧರಾಮಯ್ಯ ಅವಧಿಯಲ್ಲೇ ಸಿದ್ಧವಾಗಿದ್ದ ಬಿಲ್ ರೆಡಿಯಾಗಿತ್ತು ಎಂದು ಆಡಳಿತ ಪಕ್ಷ ಬಿಜೆಪಿ ತಿಳಿಸಿದೆ.

ಅಂದು ಸಿದ್ಧರಾಮಯ್ಯ ಸಿಎಂ ಆಗಿದ್ದ ವೇಳೆ  ಕಾನೂನು ಇಲಾಖೆ ಸಿದ್ಧಪಡಿಸಿದ್ಧ ಕರ್ನಾಟಕ ಧರ್ಮ ಸ್ವಾತಂತ್ರ್ಯ ಬಿಲ್ ಗೆ ಸಿದ್ಧರಾಮಯ್ಯ ಸಹಿ ಹಾಕಿದ್ದರು ಎನ್ನಲಾಗಿದ್ದು, ಆ ಸಹಿ ಮುಂದಿಟ್ಟುಕೊಂಡು ಬಿಜೆಪಿ ವಿಧಾನಸಭೆಯಲ್ಲಿ ಗದ್ದಲವನ್ನುಂಟು ಮಾಡಿದೆ.  ಇದೀಗ ಸಿದ್ಧರಾಮಯ್ಯ ಸಹಿಯನ್ನ ಅಸ್ತ್ರವನ್ನಾಗಿಟ್ಟುಕೊಂಡು ಬಿಜೆಪಿ ಸದನದಲ್ಲಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.ಅಶೋಕ್, ಕಾಂಗ್ರೆಸ್ ಬಿಲ್ ವಿರೋಧಿಸುವ ನೈತಿಕತೆ ಇಲ್ಲ . ಜಯಚಂದ್ರ ಕಾನೂನು ಸಚಿವರಾಗಿದ್ದಾಗಲೇ ಬಿಲ್ ರೆಡಿಯಾಗಿತ್ತು.   ಮತಾಂತರ ಅನಾಹುತ ಅರಿತು ಬಿಲ್ ಮಾಡಿದ್ದರು.  ಆ ಬಿಲ್ ಗೆ ಸ್ವಲ್ಪ ಬದಲಾವಣೆ ತಂದಿದ್ದೇವೆ. ಹೊಸ ರೂಪದಲ್ಲಿ ಕಾಯ್ದೆ ಜಾರಿ ಮಾಡುತ್ತಿದ್ದೇವೆ.  ಕಾಂಗ್ರೆಸ್ ಅಲ್ಪಸಂಖ್ಯಾತರ ಚಾಂಪಿಯನ್ ಆಗಲ್ಲ. . ಪ್ರತಿಭಟನೆ ಮಾಡುತ್ತಿರುವವರಿಗೆ ಯಾಕೆ ಭಯ..? ಎಂದು ಪ್ರಶ್ನಿಸಿದರು.

Key words: Bill – ready – Siddaramaiah- period- Revenue- Minister -R. Ashok,

ENGLISH SUMMARY…

The bill was ready when Siddaramaiah was the CM: We have made just a few changes to it – Revenue Minister R. Ashok
Belagavi, December 23, 2021 (www.justkannada.in): The BJP led state government is all set to implement the anti-conversion bill in the state. Meanwhile, it is said that the bill was prepared when Siddaramaiah was the Chief Minister.
Siddaramaiah is said to have signed the Karnataka Religious Freedom Bill prepared by the Law Department when he was the Chief Minister. Keeping the document, the BJP leaders created a row in the assembly.
Speaking about this the Revenue Minister R. Ashok informed that the Congress people do not have any morality to oppose the bill as it was prepared when Jayachandra was the Law Minister. “It was prepared observing the dangers that may arise in the future due to religious conversions. We have made just a few changes to it and introduced it in a new form. Congress won’t become a champion of the minorities… why are the protestors scared…? he questioned.
Keywords: Revenue Minister R. Ashok/ anti-conversion bill/ BJP/ Siddaramaiah/