ಬೆಂಗಳೂರು, ಫೆ.೧೨,೨೦೨೫: ಇನ್ವೆಸ್ಟ್ ಕರ್ನಾಟಕ – ಜಾಗತಿಕ ಹೂಡಿಕೆದಾರರ ಸಮಾವೇಶ 2025 ದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಜೈವಿಕ ಇಂಧನ ಕ್ಷೇತ್ರದಲ್ಲಿ ಮಂಡಳಿ ಕಳೆದ ಒಂದು ದಶಕದಲ್ಲಿ ಅನುಷ್ಠಾನಗೊಳಿಸಿರುವ ಕಾರ್ಯ ಯೋಜನೆಗಳು ಹಾಗೂ ಮಂಡಳಿಯು ಮುಂದಿನ ದಿನಗಳಲ್ಲಿ ರೂಪಿಸಲಿರುವ ಜೈವಿಕ ಇಂಧನ ಕಾರ್ಯ ಯೋಜನೆಗಳ ಪ್ರಾತ್ಯಕ್ಷಿಕ ಮಳಿಗೆಯನ್ನು ಆಯೋಜಿಸಿದೆ.
ಈ ಮಳಿಗೆಯನ್ನು ರಾಜ್ಯದ ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಮಧ್ಯಮ ಮತ್ತು ಬಾರಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷ ಎಸ್ ಈ ಸುಧೀಂದ್ರ ಅವರು ಮಂಡಳಿಯ ಜೈವಿಕ ಇಂಧನ ಕಾರ್ಯ ಯೋಜನೆಗಳು ಹಾಗೂ ಮುಂದಿನ ದಿನಗಳಲ್ಲಿ ಮಂಡಳಿಯು ಕೈಗೊಳ್ಳಲಿರುವ ಉನ್ನತಿಕರಣ ಹಾಗೂ ವಾಣಿಜ್ಯೀಕರಣ ಕಾರ್ಯಯೋಜನೆಗಳ ಕುರಿತು ಉಪಮುಖ್ಯಮಂತ್ರಿಗಳಿಗೆ ಹಾಗೂ ಕೈಗಾರಿಕಾ ಸಚಿವರಿಗೆ ಸಚಿವರಿಗೆ ಮಾಡಿಕೊಟ್ಟರು.
ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಒಂದು ಬಿಲಿಯನ್ ಡಾಲರ್ ಗೂ ಹೆಚ್ಚಿನ ಬಂಡವಾಳ ಹೂಡಿಕೆಗೆ ಅವಕಾಶಗಳಿರುವ ಸಾಧ್ಯತೆಗಳ ಕುರಿತು ಅಂಕಿ ಅಂಶಗಳೊಂದಿಗೆ ವಿವರಿಸಿ ಈ ದಿಸೆಯಲ್ಲಿ ಮಂಡಳಿ ಹೂಡಿಕೆದಾರರನ್ನು ಆಕರ್ಷಿಸಲು ಪೂರಕ ವಾತಾವರಣವನ್ನು ಸೃಜನ ಮಾಡಲು, ನೂತನ ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿ ರೂಪಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿರುವುದನ್ನು ವಿವರಿಸಿದರು.
ಸಚಿವರುಗಳು ಮಂಡಳಿ ಸಾಧಿಸಿರುವ ಪ್ರಾತ್ಯಕ್ಷಿಕೆಗಳು ಅತ್ಯುತ್ತಮವಾಗಿದ್ದು ಜೈವಿಕ ಇಂಧನ ಕ್ಷೇತ್ರದಲ್ಲಿನ ಬಯೋ ಡೀಸೆಲ್, ಬಯೋ ಬ್ರೇಕೇಟ್, ಪ್ಯಲೆಟ್ , ಕಂಪ್ರೆಸ್ದ್ ಬಯೋ ಗ್ಯಾಸ್ ಮುಂತಾದ ಕೈಗೊಂಡಿರುವ ಜೈವಿಕ ಇಂಧನ ಕಾರ್ಯ ಪ್ರಯೋಜನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷರು 2025 – 26 ನೇ ಸಾಲಿನಲ್ಲಿ ಮಂಡಳಿಗೆ ಹೆಚ್ಚಿನ ಅನುದಾನವನ್ನು ಆಯವ್ಯಯದಲ್ಲಿ ಘೋಷಿಸಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು. ಈ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ , ಜೈವಿಕ ಇಂಧನ ಕ್ಷೇತ್ರದಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.
key words: Karnataka State Bioenergy Development Board, promotional grants,
SUMMARY:
The the Karnataka State Bioenergy Development Board has organised to showcase the bioenergy related activities implemented by the board in the International Mega event invest Karnataka ; Global Investors Forum 2025. the Deputy Chief Minister of Karnataka and medium& large scale industries minister MB Patil inaugurated the stall. The Chairman of the board S.E. Sudheendra explained the Biology related activities implemented by the board and the future plans towards scaling up and commercialisation activities. Also emphasized on the opportunities and the resources available in the State to attract huge investment in the field of biodiesel, 2G ethanol, compressed biogas, green hydrogen etc. he referred the various Biology policy announced by the other State announced many inventives,concessions,promotional grants. the Chairman expressed in the same way the board in the process of developing a new bio energy policy to promote the investment in the bioenergy sector in the State in the coming days. Both the Ministers Expressed their happiness about the board biofuel activities initiatives to develop a entire value chain of biofuels in the State.