ಮೈಸೂರು, ಮಾ.೨೧, ೨೦೨೪ : ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಸ್ಥಳೀಯ ವಲಸೆ ಹಕ್ಕಿಗಳಾದ ಮೀನುಗುಡುಕ ( River Turn ) ಮತ್ತು ಸಣ್ಣದಾದ ಬೂದಿಬಣ್ಣದ ಮೀನು ಗುಟಕ ( Whisked turn ) ಚಳಿಗಾಲ ಆರಂಭವಾಗುತ್ತಿದ್ದಂತೆ ಜಲಾಶಯ ಅಥವಾ ಕೆರೆಕಟ್ಟೆಗಳಿಗೆ ಬಂದು ನೆಲೆಸುತ್ತದೆ.
ಶಿವಮೊಗ್ಗದ ಭದ್ರಾ ಜಲಾಶಯದ ಹಿನ್ನೀರಿನಲ್ಲಿ ಅತಿ ಹೆಚ್ಚಾಗಿ ಸಾವಿರಾರು ಸಂಖ್ಯೆಯಲ್ಲಿ ಕಂಡು ಬರುತ್ತಿದ್ದ ಈ ಹಕ್ಕಿಗಳಿಗೆ, ಜಲಾಶಯದ ಹಿನ್ನೀರಿನಲ್ಲಿ ನೀರು ಕಮ್ಮಿಯಾದ ಕಾರಣ ಅಲ್ಲಿಂದ ಬೇರೆ ಬೇರೆ ಜಲಾಶಯಗಳಿಗೆ ಬಂದು ಬೀಡು ಬಿಟ್ಟಿವೆ.
ಸಂತಾನೋತ್ಪತ್ತಿಗಾಗಿ ಬಂದು ನೆಲೆಸಿರುವ ಈ ಹಕ್ಕಿಗಳಿಗೆ ಬೇಸಿಗೆಗಾಲ ಆರಂಭವಾಗುತ್ತಿದ್ದಂತೆ ತಾಪಮಾನದ ಕಾರಣ ಜಲಾಶಯದ ಸಣ್ಣ ಸಣ್ಣ ದ್ವೀಪದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೀಡು ಬಿಡುತ್ತವೆ.
ಹೇರಳವಾಗಿ ಸಿಗುವ ಸಣ್ಣ ಸಣ್ಣ ಮೀನುಗಳನ್ನು ಗಂಡು ಹಕ್ಕಿ ಬೇಟೆಯಾಡಿ, ತಂದು ಹೆಣ್ಣು ಹಕ್ಕಿಗೆ ಕೊಟ್ಟು ಮನವೊಲಿಸಿಕೊಳ್ಳುತ್ತದೆ. ನಂತರ ಮಿಲನವಾಗಿ 21 ದಿನದ ನಂತರ ಮೊಟ್ಟೆ ಇಟ್ಟು ತನ್ನ ಮರಿಗಳನ್ನು ಬೆಳೆಸಿ ನಂತರ ತನ್ನ ಸಂಸಾರ ಪ್ರಾರಂಭಿಸುತ್ತಿದೆ.
ಅಲ್ಲಿಗೆ ಬೇಸಿಗೆಗಾಲ ಮುಗಿದು ಮಳೆಗಾಲ ಆರಂಭವಾಗುತ್ತಿದ್ದಂತೆ ತಮ್ಮ ತಮ್ಮ ಜಾಗಗಳಿಗೆ ಹಿಂತುರುಗುತ್ತದೆ.
- ಚಿತ್ರ ಹಾಗೂ ವಿಡಿಯೋ : ಜಿಎಸ್ ರವಿಶಂಕರ್, ಮೈಸೂರು
key words : birds ̲ kabini ̲ dam ̲ mysore