ಸರ್ಕಾರದಿಂದ ಬಿಟ್ ಕಾಯಿನ್ ಆರೋಪಿ ಶ್ರೀಕಿ ಎನ್ ಕೌಂಟರ್ ಮಾಡುವ ಸಾಧ್ಯತೆ –ಕಾಂಗ್ರೆಸ್ ಗಂಭೀರ ಆರೋಪ.

ಬೆಂಗಳೂರು,ನವೆಂಬರ್,16,2021(www.justkannada.in): ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಇದೀಗ ಮತ್ತೊಂದು ಗಂಭೀರ ಆರೋಪ ಮಾಡಿದೆ.

ಬಿಟ್ ಕಾಯಿನ್ ಪ್ರಕರಣದಲ್ಲಿ ಹ್ಯಾಕರ್ ಶ್ರೀಕಿ ಹೆಸರು ಬಲವಾಗಿ ಕೇಳಿ ಬರುತ್ತಿದ್ದು, ಈ ಹಿನ್ನೆಲೆ ಹ್ಯಾಕರ್ ಶ್ರೀಕಿಯನ್ನು ಬಿಜೆಪಿ ಸರ್ಕಾರ ಎನ್ ಕೌಂಟರ್ ಮಾಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ವಕ್ತಾರ ಸಂಕೇತ್ ಏಣಗಿ  ಆರೋಪ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಂಕೇತ್ ಏಣಗಿ, ಉತ್ತರ ಪ್ರದೇಶದ ಅಪರಾಧಗಳಲ್ಲಿಯ ತನ್ನ ಪಾತ್ರ ಬಹಿರಂಗವಾಗದಂತೆ  ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಪೊಲೀಸ್ ಎನ್ ಕೌಂಟರ್ ಮುಖೇನ ಆರೋಪಿ ವಿಕಾಸ ದುಬೆ ಹತ್ಯೆಯಂತೆಯೇ ಕರ್ನಾಟಕದ ಬಿಜೆಪಿ ಸರ್ಕಾರ ತನ್ನ ಪಕ್ಷದವರ ರಕ್ಷಣೆಗೋಸ್ಕರ ಬಿಟ್ ಕಾಯಿನ್ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಪೊಲೀಸ್ ಎನ್ ಕೌಂಟರ್ ಮಾಡುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ.

Key words: Bitcoin -accused – Shriki – government –encounter-Congress – serious allegation.

ENGLISH SUMMARY…

“Govt. may encounter Bitcoin case accused Shreeki”: State Congress makes serious allegations on BJP Govt.
Bengaluru, November 16, 221 (www.justkannada.in): Continuing their tirade against the BJP government over the Bitcoin case, the Congress leaders have made another serious allegation.
The Congress party has alleged that there are chances of the BJP government encountering hacker Sreeki, in the Bitcoin case.
In his tweet, Sanketh Enagi has mentioned that the BJP Government in Uttar Pradesh Government had also encountered Vikas Dubey, in order to protect from its involvement in several criminal activities. Hence, there are all chances of the BJP government encountering Srikrishna alias Sreeki similarly.
Keywords: Congress/ allegations/ BJP government/ encounter/ Sreeki/ Bitcoin case