ಬಿ.ಎಸ್.ಯಡಿಯೂರಪ್ಪ ವಿರುದ್ಧ POCSO ದಾಖಲು..!

 

ಬೆಂಗಳೂರು, ಮಾ.೧೫, ೨೦೨೪ : ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ದಾಖಲು.

ತಾಯೊಯೊಬ್ಬಳು ತನ್ನ 17 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ನೀಡಿದ ದೂರಿನ ಮೇರೆಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ, 2012 (ಪೋಕ್ಸೊ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಿಜೆಪಿ ನಾಯಕನ ವಿರುದ್ಧ ಪೋಕ್ಸೊ ಮತ್ತು 354 (ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವರದಿಗಳ ಪ್ರಕಾರ, ಫೆಬ್ರವರಿ 2, 2024 ರಂದು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿಯ ಸಹಾಯ ಪಡೆಯಲು ತಾಯಿ ಮತ್ತು ಮಗಳು ಹೋದಾಗ ಲೈಂಗಿಕ ದೌರ್ಜನ್ಯದ ಘಟನೆ ಸಂಭವಿಸಿದೆ.

ಬೆಂಗಳೂರು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲು.

ಕೃಪೆ : ಎಕನಾಮಿಕ್ಸ್‌ ಟೈಮ್ಸ್‌

Key words : bjp ̲ leader ̲ Yediyurappa ̲  booked under ̲  POCSO

English summary :

senior BJP leader and former Chief Minister B.S. Yediyurappa has been booked under POCSO ( Protection of Children from Sexual Offences Act, 2012) on a complaint by the mother of a 17-year-old of sexual assault.

As per reports, the alleged incident of sexual assault occurred on February 2, 2024, when the mother and daughter had gone to seek the former Chief Minister’s help in connection with a cheating case.