ರಾಜ್ಯದ ಕಲಾವಿದರ ವೇತನ ಮಂಜೂರು ಮಾಡುವಂತೆ ಬಿಜೆಪಿಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಸ್ಟ ಅಗ್ರಹ

ಬೆಂಗಳೂರು,ಆಗಸ್ಟ್,28,2024 (www.justkannada.in): ರಾಜ್ಯದ ಕಲಾವಿದರ ವೇತನ ಮಂಜೂರು ಮಾಡುವಂತೆ ಬಿಜೆಪಿಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಸ್ಟ ಅಗ್ರಹಿಸಿದೆ.

ಈ ಕುರಿತು ಬಿಜೆಪಿಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಸ್ಟ ವತಿಯಿಂದ ಬೆಂಗಳೂರಿನ ಕನ್ನಡ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಕೆ. ಧರಣಿ ದೇವಿ   ಅವರಿಗೆ ಕಲೆ ಮತ್ತು ಸಂಸ್ಕೃತಿ ಪ್ರಕೋಷ್ಠ ರಾಜ್ಯ ಸಂಚಾಲಕರಾದ ರೂಪ ಅಯ್ಯರ್ ಹಾಗೂ ಸಹ ಸಂಚಾಲಕರಾದ ಆತ್ಮನಂದ ಮನವಿ ಪತ್ರ ಸಲ್ಲಿಸಿದರು

ಕಲೆ  ಮತ್ತು ಸಂಸ್ಕೃತಿ ಇಲಾಖೆಗೆ ರಾಜ್ಯದ ಕಲೆ ಸಂಸ್ಕೃತಿ ಮತ್ತು ಭಾಷೆಗೆ ಸರ್ಕಾರದಿಂದ ಸಿಗುವ ಅನುದಾನ ಮತ್ತು ಸಹಕಾರವನ್ನು ಕಲಾವಿದರಿಗೆ ಕಲೆ, ಸಂಸ್ಕೃತಿಗೆ ಬಳಸಬೇಕಾದ ಇಲಾಖೆ ಈ ಬಗ್ಗೆ ಅಸಡ್ಡೆ ತೋರುತ್ತಿರುವುದು ದುಃಖಕರವಾಗಿದೆ ಈಗಾಗಲೇ ಕಲಾಸಂಸ್ಥೆಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ತಮ್ಮ ಖರ್ಚಿನಲ್ಲೇ ನಿರ್ವಹಿಸಿ ತೊಂದರೆಗೆ ಒಳಗಾಗಿದ್ದಾರೆ.  ಈಗಾಗಲೇ 2023 -24 ನೇ ಸಾಲಿನ ಧನಸಹಾಯ ಮಂಜೂರಾಗಿದ್ದು 30% ಹಾಗೂ 40% ರಂತೆ ಬಿಡುಗಡೆ ಮಾಡಿದೆ.  ಇನ್ನ ಉಳಿದ ಧನಸಹಾಯವನ್ನು ಒಂದೇ ಕಂತಿನಲ್ಲಿ ಮಾಡಬೇಕೆಂದು ಒತ್ತಾಯಿಸಿದರು.

ಕಲಾವಿದರಿಗೆ ಸಿಗಬೇಕಾದ ಕಲಾವಿದರ ವೇತನ ಕಳೆದ ಮೂರು ತಿಂಗಳಿನಿಂದ ಯಾವುದೇ ಕಲಾವಿದರಿಗೆ ಬಂದಿಲ್ಲ.  ಆದ್ದರಿಂದ ಹಿರಿಯ ಕಲಾವಿದರಿಗೆ ವೈದ್ಯಕೀಯ ಖರ್ಚಿಗೆ ತೊಂದರೆಯಾಗುತ್ತದೆ ಎಂದು ಕಛೇರಿಗೆ ಅಲೆದಾಡುತ್ತಿದ್ದಾರೆ.  ಹೀಗಾಗಿ ಕೂಡಲೇ ಕಲಾವಿದರಿಗೆ ವೇತನ ಸಿಗಬೇಕೆಂದು ಒತ್ತಾಯ ಮಾಡುತ್ತೇವೆ ಎಂದು ರೂಪ ಅಯ್ಯರ್ ತಿಳಿಸಿದರು.

Key words: BJP,  art and culture, sanction, salaries, artists