ಕೊಪ್ಪಳ,ಜುಲೈ,25,2021(www.justkannada.in): ಬಿಜೆಪಿ ಅಂದ್ರೆ ಬ್ಯುಸಿನೆಸ್ ಜನತಾ ಪಾರ್ಟಿ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಕೊಪ್ಪಳದಲ್ಲಿ ಇಂದಯ ಮಾತನಾಡಿದ ಮಾಜಿ ಶಾಸಕ ಮಧು ಬಂಗಾರಪ್ಪ, ಬಿಜೆಪಿಯವರು ಕೇವಲ ವ್ಯವಹಾರಕ್ಕಾಗಿ ಮಾತ್ರ ಬರುತ್ತಾರೆ. ನಂತರ ಇಡೀ ದೇಶ ಲೂಟಿ ಮಾಡಿ, ಹಾಳು ಮಾಡಿ ಹೋಗುತ್ತಾರೆ. ಇದು ನಮ್ಮೆಲ್ಲರ ದುರಂತ ಎಂದು ಹರಿಹಾಯ್ದರು.
ವ್ಯವಹಾರ ಮಾಡಿದಾಗ ಅದು ಕುದುರದೇ ಹೋದರೆ ವ್ಯವಹಾರ ಬಿದ್ದುಹೋಗುತ್ತದೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಸದ್ಯ ಅದೇ ಪರಿಸ್ಥಿತಿಯಲ್ಲಿದೆ. ಅವರ ವ್ಯವಹಾರ ಕುದುರದ ಕಾರಣ, ಸರ್ಕಾರ ಬಿದ್ದು ಹೋಗುವ ಹಂತದಲ್ಲಿದೆ ಎಂದು ಮಧು ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.
Key words: BJP – Business –Janata-Party-Former MLA -Madhu Bangarappa