ಮೈಸೂರು ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಆಯ್ಕೆ : ಜೆಡಿಎಸ್ ಗೆ ಕೈ ತಪ್ಪಿದ ಉಪಮೇಯರ್ ಸ್ಥಾನ.

ಮೈಸೂರು,ಸೆಪ್ಟಂಬರ್,6,2022(www.justkannada.in):  ಮೈಸೂರು ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಕೊನೆಯ ಕ್ಷಣದಲ್ಲಿ ಬಿಜೆಪಿ –ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ಧುಗೆಗೇರಿದ್ದಾರೆ.

ಬಿಜೆಪಿ ಅಭ್ಯರ್ಥಿ ಶಿವಕುಮಾರ್  ಮೈಸೂರಿನ 60ನೇ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.  ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿದ ಹಿನ್ನೆಲೆ ಶಿವಕುಮಾರ್ ಪರ 48 ಮತಗಳು ಚಲಾವಣೆಯಾದವು. ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಹಸ್ರತ್ ಉಲ್ಲಾ ಅವರಿಗೆ   28 ಮತ ಚಲಾವಣೆಯಾದವು. ಈ ಮೂಲಕ ಶಿವಕುಮಾರ್ ಮೈಸೂರು ಮೇಯರ್ ಆಗಿ ಆಯ್ಕೆಯಾದರು.

ಜೆಡಿಎಸ್ ಕೈ ತಪ್ಪಿದ ಉಪಮೇಯರ್ ಪಟ್ಟ: ಬಿಜೆಪಿ ಪಾಲು.

ಉಪಮೇಯರ್ ಚುನಾವಣೆಯಲ್ಲಿ ಅಂತಿಮ ಕ್ಷಣದಲ್ಲಿ ನಡೆದ ಟ್ವಿಸ್ಟ್ ನಲ್ಲಿ ಬಿಜೆಪಿಗೆ ವರದಾನವಾಗಿದ್ದು ಬಿಜೆಪಿ ಅಭ್ಯರ್ಥಿ ರೂಪಾ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಕೊನೆಯ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ರೇಷ್ಮಾಭಾನು ಅವರ ನಾಮಪತ್ರ  ಅಸಿಂಧುವಾಯಿತು. ಉಪಮೇಯರ್ ಸ್ಥಾನ ಬಿಸಿಎ ಮಹಿಳೆಗೆ ಮೀಸಲಾಗಿತ್ತು. ಆದರೆ  ರೇಷ್ಮಾ ಭಾನು ಅವರು   ಜನರಲ್ ವಾರ್ಡ್ ನಿಂದ ಸ್ಪರ್ಧಿಸಿ ಗೆದ್ಧಿದ್ದರು. ಹೀಗಾಗಿ ಬಿಸಿಎ ಪ್ರಮಾಣ ಪತ್ರ ನೀಡುವಲ್ಲಿ ವಿಫಲರಾದ ಹಿನ್ನೆಲೆ ರೇಷ್ಮಾ ಭಾನು ಅವರ ನಾಮಪತ್ರ ಅಸಿಂಧುವಾಯಿತು. ಈ ಮೂಲಕ ಜೆಡಿಎಸ್ ಮಾಡಿಕೊಂಡ ಯಡವಟ್ಟಿನಿಂದಾಗಿ ಉಪಮೇಯರ್ ಸ್ಥಾನವನ್ನ ಕಳೆದುಕೊಳ್ಳುವಂತಾಯಿತು.

ಜೆಡಿಎಸ್ ಗೆ ಉಪಮೇಯರ್ ಪಟ್ಟ ಕೈ ತಪ್ಪಿದ ಹಿನ್ನೆಲೆ ಆಕ್ರೋಶಗೊಂಡ ಜೆಡಿಎಸ್ ಕಾರ್ಯಕರ್ತರು ಗಲಾಟೆ ನಡೆಸಿದರು. ಹೀಗಾಗಿ ಪಾಲಿಕೆ ಆವರಣದಲ್ಲಿ ಹೈ ಡ್ರಾಮಾ ಸೃಷ್ಠಿಯಾಯಿತು. ಉಪಮೇಯರ್ ಸ್ಥಾನ ಕೈ ತಪ್ಪಿದ್ದಕ್ಕೆ ರೇಷ್ಮಾಬಾನು ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದರು. ಇದು ಉದ್ದೇಶ ಪೂರ್ವಕವಾಗಿ ಮಾಡಿರುವ ಷಡ್ಯಂತ್ರ. ಸ್ಕ್ರೂಟ್ನಿ ಮಾಡುವ ಸಮಯದಲ್ಲಿ ಏನೂ ಹೇಳದೆ ಈಗ ಅಂತಿಮ ಕ್ಷಣದಲ್ಲಿ ನಮಗೆ ಅನ್ಯಾಯ ಮಾಡಿದ್ದಾರೆ.  ಇದು ಅಧಿಕಾರಿಗಳ ವಂಚನೆ.  ನಾವು ಬಿಜೆಪಿ ಅಥವಾ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿಲ್ಲ. ಇದು ಚುನಾವಣಾ ಅಧಿಕಾರಿಗಳಿಂದ ಆದ ಪ್ರಮಾದ ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ  ಎಂದ ಮಾಜಿ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಅಜೀಜ್ ಹೇಳಿದರು.

ಉದ್ದೇಶ ಪೂರ್ವಕವಾಗಿಯೆ ಅರ್ಜಿ ತಿರಸ್ಕೃತ- ಕಾಂಗ್ರೆಸ್ ಆರೋಪ

ಇದೇ ವೇಳೆ ಕಾಂಗ್ರೆಸ್-ಜೆಡಿಎಸ್ ಸದಸ್ಯರ ನಡುವೆ ವಾಗ್ವಾದ ನಡೆದಿದ್ದು ಉದ್ದೇಶ ಪೂರ್ವಕವಾಗಿಯೆ ಅರ್ಜಿ ತಿರಸ್ಕೃತವಾಗುವಂತೆ ಮಾಡಿದೆ ಎಂದು ಕಾಂಗ್ರೆಸ್ ಸದಸ್ಯರು  ಆರೋಪ ಮಾಡಿದರು. ಬಿಜೆಪಿ ಬಿ.ಟೀಮ್ ನಾಟಕ ನಡೆಯಲ್ಲ. ಮೊಸಳೆ ಕಣ್ಣೀರು ನಡೆಯಲ್ಲ ಎಂದು  ಜೆಡಿಎಸ್ ವಿರುದ್ದ ಕಾಂಗ್ರೆಸ್ ಪಾಲಿಕೆ ಸದಸ್ಯರು ಕಿಡಿ ಕಾರಿದರು. ಅರ್ಜಿ ಸಲ್ಲಿಸುವ ವೇಳೆ ಸರ್ಟಿಫಿಕೇಟ್ ಇಲ್ಲ ಅಂತ ಹೇಳಬೇಕಲ್ವಾ ಎಂದು ಚುನಾವಣಾಧಿಕಾರಿಗೆ ಶಾಸಕ ಜಿಟಿ ದೇವೇಗೌಡ ಪ್ರಶ್ನಿಸಿದರು.

ವ್ಯವಸ್ಥಿತವಾಗಿ ಅಲ್ಪಸಂಖ್ಯಾತ ಉಪಮೇಯರ್ ಅಭ್ಯರ್ಥಿಗೆ ಮೋಸ ಮಾಡಲಾಗಿದೆ. ಟೋಪಿ, ಬುರ್ಖಾ ಹಾಕಿಕೊಂಡು ಬಿಜೆಪಿ ಸೇರಿದ ಜೆಡಿಎಸ್ ಎಂದು ಕೂಗಿ ಕಾಂಗ್ರೆಸ್ ಸದಸ್ಯರು ಟೀಕಿಸಿದರು.

Key words: BJP -candidate -Shivakumar -elected – Mysore Mayor-jds

ENGLISH SUMMARY…

BJP candidate Shivakumar elected as Mysuru Mayor: JDS loses Dy. Mayor’s seat
Mysuru, September 6, 2022 (www.justkannada.in): The BJP-JDS has grabbed power in the Mayoral elections of the Mysore City Corporation as a result of the last-minute alliance between the two parties.
BJP candidate Shivakumar has been elected as the 60th Mayor of Mysuru. JDS supported the BJP resulting in 48 votes for Shivakumar. Congress candidate Syed Hasrath Ulla received 28 votes.
JDS loses Dy. Mayor’s post: BJP gets it
A last-minute twist in the election for the Deputy Mayor post has proved lucky for the BJP. The BJP candidate Roopa was elected as the Deputy Mayor. At the last minute, the JDS candidate Reshma Banu’s nomination was declared invalid. The post of Deputy Mayor was reserved for BCA women. But Reshma Banu has won from a general ward. As she failed to produce the BCA certificate her nomination was declared invalid. Thus due to the mistake, JDS lost the post of Deputy Mayor.
JDS party workers created a ruckus due to this for some time at the venue, resulting in a high dram in the MCC premises.
Reshma Banu’s supporters expressed their dissatisfaction and claimed that it has been done purposefully. “They have meted out injustice to us without saying anything during scrutiny. It is cheating by the officers. We are not opposing are expressing our ire at the BJP or Congress. This is a gross mistake by the Electoral officials. We will fight legally,” said former Exhibition Authority Chairman Abdul Aziz.
Keywords: MCC/ Mayoral elections/ BJP/ Shivakumar elected Mayor