ಮೈಸೂರು,ಆಗಸ್ಟ್,11,2021(www.justkannada.in): ದೇಶದಲ್ಲಿ ಬಿಜೆಪಿ 16 ವರ್ಷಗಳ ಕಾಲ ಆಡಳಿತ ಮಾಡಿದೆ. ಇವರು ಯಾಕೆ ಜಾತಿ ಗಣತಿ ಮಾಡಬಾರದು? ಜಾತಿ ಗಣತಿ ಮಾಡಿದರೆ ಬಡವರು ಯಾರೆಂದು ತಿಳಿಯುತ್ತದೆ. ಆ ನಂತರ ಯೋಜನೆಗಳನ್ನು ರೂಪಿಸಿ ಅವರಿಗೆ ಸಹಾಯ ಮಾಡಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿದ್ಧರಾಮಯ್ಯ, ಬಿಜೆಪಿ ಯಾವತ್ತೂ ಸಾಮಾಜಿಕ ನ್ಯಾಯದ ಪರ ಇರಲ್ಲ. ಬಿಜೆಪಿಯವರು ಯಾವತ್ತೂ ಮೀಸಲಾತಿ ಪರವಾಗಿ ಇಲ್ಲ. ಮುಂದುವರಿದ ಸಮುದಾಯಕ್ಕೂ ಮೀಸಲಾತಿ ಕೊಟ್ಟಿದ್ದಾರೆ. ಬಡವರಿಗೆ ಶೇಕಡಾ 10ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ಹೀಗಾಗಿ ಅವರು ಈಗ ಮೀಸಲಾತಿ ವಿರುದ್ಧ ಮಾತನಾಡಲ್ಲ ಎಂದು ಕಿಡಿಕಾರಿದರು.
ನಾವು ಎಷ್ಟು ವರ್ಷ ಇದ್ದೇವೇ ಎಂಬುವುದು ಮುಖ್ಯವಲ್ಲ. ಇರುವಷ್ಟು ದಿನವೂ ಆರೋಗ್ಯವಾಗಿ ಜೀವಿಸಬೇಕು.
ನಾನು 75ನೇ ವರ್ಷಕ್ಕೆ ಕಾಲಿಟಿದ್ದೇನೆ. ನನ್ನ ನಿಜವಾದ ಹುಟ್ಟುಹಬ್ಬದ ದಿನ ನನಗೆ ಗೊತ್ತಿಲ್ಲ. ನಾನು ಎಂದೂ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಶಾಲೆಯಲ್ಲಿ ನಮೂದಿಸಿದ್ದ ದಿನಾಂಕದ ಪ್ರಕಾರ ಇದನ್ನು ಹೇಳಿದ್ದೇನೆ. ನಾವು ಎಷ್ಟು ವರ್ಷ ಇದ್ದೇವೇ ಎಂಬುವುದು ಮುಖ್ಯವಲ್ಲ. ಇರುವಷ್ಟು ದಿನವೂ ಆರೋಗ್ಯವಾಗಿ ಜೀವಿಸಬೇಕು. 2000ರಲ್ಲಿ 2 ಸ್ಟೆಂಟ್ ಹಾಕಿಸಿದ್ದೇನೆ. ನಾನು ಈಗ ಆಯಕ್ಟಿವ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
Key words: BJP – Caste Census-Former CM -Siddaramaiah –question-mysore