ಚಿತ್ರದುರ್ಗ,ಮಾರ್ಚ್,29,2024 (www.justkannada.in): ಚಿತ್ರದುರ್ಗ ಕ್ಷೇತ್ರದಿಂದ ಪುತ್ರ ರಘುಚಂದನ್ ಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಸೆಡ್ಡು ಹೊಡೆದಿರುವ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಇಂದು ಬೆಂಬಲಿಗರು ಕಾರ್ಯಕರ್ತರ ಸಭೆ ನಡೆಸಿದ್ದಾರೆ.
ಚಿತ್ರದುರ್ಗ ಕ್ಷೇತ್ರದ ಟಿಕೆಟ್ ಬದಲಿಸದಿದ್ರೆ ಪುತ್ರ ರಘುಚಂದನ್ ಪಕ್ಷೇತರವಾಗಿ ಸ್ಪರ್ಧಿಸಲಿದ್ದಾರೆ. ಪಕ್ಷ ನನ್ನ ವಿರುದ್ದ ಕ್ರಮ ಕೈಗೊಂಡರೇ ಕೈಗೊಳ್ಳಲಿ. ಮೊದಲೇ ನಾನು ಎಲ್ಲದಕ್ಕೂ ಸಿದ್ದನಿದ್ದೇನೆ ಎಂದು ಶಾಸಕ ಎಂ.ಚಂದ್ರಪ್ಪ ಎಚ್ಚರಿಕೆ ನೀಡಿದ್ದಾರೆ.
ಬೆಂಬಲಿಗರು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಎಂ.ಚಂದ್ರಪ್ಪ, 2019ರಲ್ಲಿ ಚಿತ್ರದುರ್ಗ ಟಿಕೆಟ್ ಕೇಳಿದ್ದೆ. ಆಗ 2024ರ ಟಿಕೆಟ್ ಭರವಸೆ ನೀಡಿದ್ದರು. ಈಗ ನನ್ನ ಪುತ್ರನಿಗೆ ಟಿಕೆಟ್ ತಪ್ಪಿಸಿ ಕಾರಜೋಳಗೆ ಟಿಕೆಟ್ ನೀಡಿದ್ದಾರೆ. ಮುಧೋಳದಿಂದ ಕರೆತಂದು ಟಿಕೆಟ್ ನೀಡಿದ್ದಾರೆ. ಚಿತ್ರದುರ್ಗ ಕ್ಷೇತ್ರದಿಂದ ಯಾರು ಗಂಡಸರೇ ಇರಲಿಲ್ಲವೇ..? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ ಕ್ಷೇತ್ರ ಒಂದು ರೀತಿ ನಿರಾಶ್ರಿತರ ಕೇಂದ್ರವಾಗಿದೆ. ಸೋತ ನಾಯಕರನ್ನ ಚಿತ್ರದುರ್ಗಕ್ಕೆ ಕರೆತಂದು ಎಂಪಿ ಮಾಡ್ತಾರೆ. ಏಪ್ರಿಲ್ 3 ರಂದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಚಂದ್ರಪ್ಪ ತಿಳಿಸಿದ್ದಾರೆ.
Key words: BJP, Chitradurga, MLA, M.chandrappa