ಬೆಂಗಳೂರು,ಜುಲೈ,26,2022(www.justkannada.in): ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷದ ಸಾಧನಾ ಸಮಾವೇಶ ಮಾಡುತ್ತಿದೆ. ನಾವು ಜನೋತ್ಸವ ಎನ್ನುವುದಿಲ್ಲ. ಇದು ಬಿಜೆಪಿ ಭ್ರಷ್ಟೋತ್ಸವ ಎನ್ನುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ ಶಿವಕುಮಾರ್, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರ ತಾಂಡವಾಡುತ್ತಿದೆ. ಕರ್ನಾಟಕ ಭಾರತದ ಭ್ರಷ್ಟಾಚಾರದ ರಾಜಧಾನಿಯಾಗಿದೆ. ಎಲ್ಲಾ ಸರ್ಕಾರಿ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆದಿದೆ. ಇದು ರಾಜ್ಯ ಸರ್ಕಾರದ ಸಾಧನೆ ಎಂದು ಟೀಕಿಸಿದರು.
ಹಾಲು, ಮೊಸರಿಗೆ ಜಿಎಸ್ ಟಿ ಹಾಕಿ ಹೊಸ ಇತಿಹಾಸ ಬರೆದಿದ್ದೀರಿ. ರೈತರು ಸೇರಿದಂತೆ ಯಾರಿಗೂ ಸರ್ಕಾರ ಸಹಾಯ ಮಾಡಿಲ್ಲ. ಬೆಡ್ ಸ್ಕ್ಯಾಮ್ ಇಡೀ ದೇಶಕ್ಕೆ ಪರಿಚಯ ಆಯ್ತು. ಪಿಪಿಇ ಕಿಟ್ ಹೆಣದ ಮೇಲೂ ದುಡ್ಡು ಮಾಡಿಕೊಂಡ್ರಿ. ಕೋವಿಡ್ ನಿಂದ ಮೃತಪಟ್ಟವರಿಗೂ ಸರ್ಕಾರ ಪರಿಹಾರವನ್ನೇ ಕೊಟ್ಟಿಲ್ಲ .ಇದು ನಿಮ್ಮ ಸಾಧನೆನಾ..? ಎಂದು ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಫುರ್ಣ ಹದಗೆಟ್ಟಿದೆ. ಮಂಗಳೂರಿನಲ್ಲಿ ಮತ್ತೆ ಪಬ್ ಮೇಲೆ ದಾಳಿ ನಡೆದಿದೆ. ವಿದ್ಯಾರ್ಥಿ ಜೀವನದಲ್ಲಿ ಏಕೆ ಮಧ್ಯಪ್ರವೇಶ ಮಾಡುತ್ತೀರಿ . ಪೊಲೀಸರು ಸಮವಸ್ತ್ರ ಬಿಚ್ಚಿ ಕೇಸರಿ ಬಟ್ಟೆ ಹಾಕಿ ಕುಳಿತಿದ್ದಾರೆ. ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಹಣ ವಸೂಲಿ ನಡೆಯುತ್ತಿದೆ. ಬಿಜೆಪಿ ಕಾರ್ಯಕರ್ತರು ಹಣ ವಸೂಲಿ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮುಚ್ಚಿಹಾಕುವ ತಂಡ ಈ ಸರ್ಕಾರ ಎಂದು ಡಿ.ಕೆ ಶಿವಕುಮಾರ್ ಕಿಡಿಕಾರಿದರು.
Key words: BJP- corruption- festival- DK Shivakumar -critisize