ಯಾವ ಸಾಧನೆಗಾಗಿ ಪ್ರತಿಭಟನೆ, ಚಿಕ್ಕಮಗಳೂರು ಬಂದ್? ಡಿಸಿಎಂ ಡಿಕೆ ಶಿವಕುಮಾರ್ ಕಿಡಿ

ಮಂಡ್ಯ,ಡಿಸೆಂಬರ್,20,2024 (www.justkannada.in):  ಎಂಎಲ್ ಸಿ ಸಿ.ಟಿ ರವಿ ಅವರನ್ನ ಬಂಧಿಸಿದ್ದಕ್ಕಾಗಿ ಬಿಜೆಪಿ ನಾಯಕರ , ಕಾರ್ಯಕರ್ತರ ಪ್ರತಿಭಟನೆಗೆ ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸಿ ಟಿ ರವಿ ಅವರಿಂದ ಆಕ್ಷೇಪಾರ್ಹ ಪದ ಬಳಕೆ ಇದು ಸದನಕ್ಕೆ ಮಾಡಿರುವ ಅಪಮಾನ ಅಲ್ಲ, ಇಡೀ ಸ್ತ್ರೀ ಕುಲಕ್ಕೆ ಮಾಡಿರುವ ಅಪಮಾನ. ಯಾವ ಸಾಧನೆಗಾಗಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ.  ಯಾವ ಸಾಧನೆಗಾಗಿ ಚಿಕ್ಕಮಗಳೂರು ಬಂದ್ ಗೆ ಕರೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಇನ್ನು ನನಗೆ ಜೀವ ಬೆದರಿಕೆ ಇದೆ ಏನಾದ್ರೂ ಆದರೆ ಕಾಂಗ್ರೆಸ್ ರಾಜ್ಯ ಸರ್ಕಾರ ಕಾರಣ ಎಂಬ ಸಿ.ಟಿ ರವಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಜೀವ ಬೆದರಿಕೆ ಹಾಕಿದ್ರೆ ತನಿಖೆ ಮಾಡಿಸಲಿ  ಎಂದರು.

Key words: Protest, Chikkamagaluru bandh, BJP, DCM, DK Shivakumar