ಬೆಳಗಾವಿ,ಡಿಸೆಂಬರ್,14,2021(www.justkannada.in): ವಿಧಾನಪರಿಷತ್ 25 ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇನ್ನು 2ನೇ ಪ್ರಾಶಸ್ತ್ಯ ಮತದಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದರೇ ಬಿಜೆಪಿ ಸೋಲನುಭವಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ರಮೇಶ ಜಾರಕಿಹೊಳಿಗೆ ಬಿಜೆಪಿ ಸೋಲಿಸುವ ಗುರಿ ಇತ್ತು. ಹೀಗಾಗಿ ನಮ್ಮ ಹೆಸರು ಹೇಳುತ್ತಿದ್ದರು. ರಮೇಶ ಜಾರಕಿಹೊಳಿ ಲೆಕ್ಕಾಚಾರ ಯಾರಿಗೂ ಗೊತ್ತಾಗಲ್ಲ. ಮಿಲ್ಟ್ರಿಯಲ್ಲಿ ಡಿ- ಕೋಡಿಂಗ್ ರೀತಿ ರಮೇಶ ಪ್ಲ್ಯಾನ್ ಇತ್ತು. ಬಿಜೆಪಿ ಅಭ್ಯರ್ಥಿ ಸೋಲಿಸಿ ಪಕ್ಷದಲ್ಲಿ ಅಧಿಪತ್ಯದ ಸಾಧಿಸಲು ಪ್ಲ್ಯಾನ್ ಅವರದ್ಧು ಎಂದಿದ್ದಾರೆ.
ಬೆಳಗಾವಿಯಲ್ಲಿ ನಿರೀಕ್ಷೆಯಂತೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದೆ. ನಿರೀಕ್ಷೆಗಿಂತ 300 ಮತಗಳು ಹೆಚ್ಚು ಕಾಂಗ್ರೆಸ್ ಗೆ ಬಂದಿದೆ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಮುಂದಿನ ಚುನಾವಣೆ ಗೆಲ್ಲಲ್ಲು ಸುಲಭವಾಗಿದೆ. ಚುನಾವಣೆಗೂ ಮೊದಲು ಸಿಎಂ ಬಂದು ತಂತ್ರಗಾರಿಕೆ ಮಾಡಿದ್ದರು.ಆದರೆ ಬಿಜೆಪಿಯ ತಂತ್ರಗಾರಿಕೆ ಫಲ ನೀಡಿಲ್ಲ. ಕಾಂಗ್ರೆಸ್ ಮುಳುಗುವ ಹಡಗು ಎಂದು ಹೇಳಿದ್ದವರಿಗೆ ನೀವೆ ಪ್ರಶ್ನೆ ಮಾಡಿ. ಕಾಂಗ್ರೆಸ್ ವೇಗ ಕಡಿಮೆ ಇರಬಹುದು ಆದರೇ ನಿಲ್ಲಲ್ಲ. 2023ರ ವಿಧಾನ ಸಭೆ ಚುನಾವಣೆಗೆ ಪಕ್ಷ ಸಂಘಟನೆಯ ಹೆಚ್ಚಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
Key words: BJP- defeat- aim -Ramesh jarakiholi- KPCC –work-President- Satish Zarakiholi