ಬಿಜೆಪಿಯವರು ಇಡಿ, ಐಟಿ, ಸಿಬಿಐ ಕರೆಸುತ್ತಿದ್ದಾರೆ- ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಬೆಂಗಳೂರು, ಜುಲೈ 12,2024 (www.justkannada.in): ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ, ತನಿಖೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ,  ಬಿಜೆಪಿಯವರು ತಮ್ಮ ಅವಧಿಯಲ್ಲಿನ 1 ಹಗರಣಕ್ಕೂ ಐಟಿ, ಇಡಿ, ಸಿಬಿಐ ಕರೆಸಲಿಲ್ಲ.  ಈ ಐಟಿ, ಇಡಿ, ಸಿಬಿಐ ಕರೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಮುಡಾ ಅವ್ಯವಹಾರ ಪ್ರಕರಣ ತನಿಖೆ ಮುಗಿಯುವವರೆಗೆ ಬಿಜೆಪಿ ನಾಯಕರು ಕಾಯಬೇಕಿತ್ತು. ಆದರೆ ಇಡಿ ಕರೆಸಿದ್ದಾರೆ ಎಂದರು.

ಬಿಜೆಪಿ ಪ್ರತಿಭಟನೆಗೆ ತಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಮುಂಜಾಗ್ರತಾ ಕ್ರಮವಾಗಿ ಬಿಜೆಪಿಯವರನ್ನ ವಶಕ್ಕೆ ಪಡೆಯಲಾಗಿತ್ತು. ಬಿಜೆಪಿಯವರು ನಮಗೂ ಹೀಗೆ ಮಾಡಿರಲಿಲ್ಲವಾ? ಪಿಎಸ್‌ಐ ನೇಮಕಾತಿ ಹಗರಣ ಹೊರಗೆಳೆದಿದ್ದಕ್ಕೆ ನೋಟಿಸ್ ನೀಡಿದ್ದರು. ಬಿಜೆಪಿ ಅವಧಿಯಲ್ಲಿ ಮುಡಾದಲ್ಲಿ ಅಕ್ರಮ ನಡೆದಿದೆ. ರಾಜ್ಯದಲ್ಲಿ ಆಡಳಿತದಲ್ಲಿ ಬಿಜೆಪಿ ಯಾಕೆ ಅಂದೇ ಪ್ರಶ್ನೆ ಮಾಡಿರಲಿಲ್ಲ ಎಂದು ಪ್ರಶ್ನಿಸಿದರು.

Key words: BJP, ED, IT, CBI, minister, Priyank Kharge