ಚಿಕ್ಕಮಗಳೂರು,ಜೂನ್,28,2023(www.justkannada.in): ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಹೇಳುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಲೇವಡಿ ಮಾಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ನಾನು ಆರೋಪ ಹೊತ್ತಿಲ್ಲ. ಆದರೆ ಆರೋಪ ಹೊರಿಸಲಾಗಿತ್ತು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದರು. ಆದರೆ ಬಿಜೆಪಿ ಸರ್ಕಾರದ ವಿರುದ್ದ ಯಾವುದೇ ದಾಖಲೆಗಳು ನೀಡಲಿಲ್ಲ. ದಾಖಲೆ ಇಲ್ಲದೇ ಇವರು ಏನು ತನಿಖೆ ಮಾಡುತ್ತಾರೆ. ಬೆಟ್ಟ ಅಗೆದರೇ ಕಾಂಗ್ರೆಸ್ ಗೆ ಇಲಿಯೂ ಸಿಗಲ್ಲ ಎಂದು ವ್ಯಂಗ್ಯವಾಡಿದರು.
Key words: BJP- former Minister-CT Ravi-tong-congress