ಸಿಎಂ ಸ್ಥಾನಕ್ಕೆ ಕತ್ತಿಯವರು ಕನಸು ಕಾಣಬೇಕಷ್ಟೇ- ಶಾಸಕ ಉಮೇಶ್ ಕತ್ತಿ ವಿರುದ್ಧ ಕಟ್ಟಾ ಸುಬ್ರಮಣ್ಯನಾಯ್ಡು ವ್ಯಂಗ್ಯ…

ಬೆಂಗಳೂರು,ಮೇ,30,2020(www.justkannada.in): ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿ ತಮ್ಮ ಅಸಮಾಧಾನ ತೋರ್ಪಡಿಸುತ್ತಿರುವ ಹಿರಿಯ ಶಾಸಕ ಉಮೇಶ್ ಕತ್ತಿ ವಿರುದ್ದ ಬಿಜೆಪಿ ಮುಖಂಡ ಕಟ್ಟಾ ಸುಬ್ರಮಣ್ಯ ನಾಯ್ಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಮೇಶ್ ಕತ್ತಿಯವರ ಪ್ರಯತ್ನ ವಿಫಲವಾಗಲಿದೆ ಎಲ್ಲರಿಗೂ ಸಿಎಂ ಆಗಬೇಕೆಂಬ ಆಸೆಯಿದೆ. ಸಿಎಂ ಸ್ಥಾನಕ್ಕೆ ಕತ್ತಿಯವರು ಕನಸು ಕಾಣ್ಬೇಕಷ್ಟೇ ಎಂದು ಉಮೇಶ್ ಕತ್ತಿ ವಿರುದ್ಧ ಕಟ್ಟಾ ಸುಬ್ರಮಣ್ಯ ನಾಯ್ಡು ವ್ಯಂಗ್ಯವಾಡಿದ್ದಾರೆ.

ಬಿಜೆಪಿಯಲ್ಲಿ ಭಿನ್ನಮತ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ನಾನು ಪಾರ್ಟಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲ ಯಾರ್ಯಾರು ಅಸಮಾಧಾನ ಇದೆ ಅಂತ ಹೇಳ್ತಾರೆ ಅವರೇ ಹೇಳಬೇಕು. ಬಿಎಸ್ ವೈ ಅವರನ್ನ ನಾವು ಬೆಂಬಲಿಸಬೇಕು. ಅವರ ಸರ್ಕಾರವನ್ನ ಉಳಿಸಬೇಕು.ಅಸ್ಥಿರತೆ ತರುವ ಮಾತು ನಾವು ಆಡಬಾರದು. ಅತೃಪ್ತರು ಬರದಿದ್ದರೆ ಸರ್ಕಾರ ರಚನೆಯಾಗ್ತಿತ್ತಾ? ಎಂದು ಪ್ರಶ್ನಿಸಿದರು.

ಯಾರ್ಯಾರು ಮಾತನಾಡ್ತಿದ್ದಾರೆ ಅವರು ಸ್ವಲ್ಪ ತಾಳ್ಮೆ ಇರಬೇಕು. ಕತ್ತಿಯವರೊಬ್ಬರಿಂದಲೇ ಸರ್ಕಾರ ಅಸ್ತಿತ್ವಕ್ಕೆ ಬಂದಿಲ್ಲ. ಸರ್ಕಾರ ಕೆಡವೋಕೆ ಯಾಕೆ ಪ್ರಯತ್ನ ಮಾಡ್ಬೇಕು. ನಿಮ್ಮ ಬಾಯಿಂದ ಯಾಕೆ ಇಂತ ಮಾತು ಬರಬೇಕು. ಕೇಂದ್ರದ ನಾಯಕರನ್ನ ಭೇಟಿ ಮಾಡಿದ್ರಿ. ನೀವು ಮಂತ್ರಿ ಆದ್ರೆ ನಮಗೂ ಸಂತೋಷ. ಸ್ವಲ್ಪ ದಿನ ಕಾಯ್ಬೇಕಲ್ಲ ,ಯಾಕೆ ಹೀಗೆ ಮಾಡ್ತೀರ. ಕೇಂದ್ರ ಎಲ್ಲವನ್ನೂ ಗಮನಿಸುತ್ತಿದೆ ಎಂದು ಕಟ್ಟಾ ಸುಬ್ರಮಣ್ಯ ನಾಯ್ಡು ಎಚ್ಚರಿಕೆ ನೀಡಿದರು.bjp- former minister-kattasubramanya naidu-umesh katti

ಇದೇ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದವೂ ಹರಿಹಾಯ್ದ ಕಟ್ಟಾ ಸುಬ್ರಮಣ್ಯ ನಾಯ್ಡು, ಯತ್ನಾಳ್ ಎಲ್ಲದ್ರು,ಹೇಗೆ ಬಂದು ತಿಳಿದುಕೊಳ್ಳಲಿ. ಯಾರ ಆಶೀರ್ವಾದಿಂದ ಇಲ್ಲಿಗೆ ಬಂದ್ರು ತಿಳಿಯಲಿ. ಅವರು ಸಚಿವ ಸ್ಥಾನ ಕೇಳೋದು ತಪ್ಪಲ್ಲ. ಅದಕ್ಕೆ ಕಾಯಬೇಕಲ್ವಾ. ರಾಜ್ಯದಲ್ಲಿ ಅಧಿಕಾರ ಹೇಗೆ ಬಂದಿದ್ದು‌. ಹೊರಗಿನಿಂದ ಬಂದಿದ್ದರಿಂದ ತಾನೇ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಎಂದು ಪ್ರಶ್ನಿಸಿದರು.

ಒಂದು ವರ್ಷದ ಅವಧಿಯಲ್ಲಿ ಏರುಪೇರು ದೇಶ ಕಂಡಿದೆ. ಕೊರೋನಾದಿಂದ ತೊಂದರೆಗೊಳಗಾಗಿದ್ದೇವೆ. ಮೋದಿ ನೇತೃತ್ವದ ಸರ್ಕಾರ ಕೋವಿಡ್ ನಿಯಂತ್ರಿಸುತ್ತಿದೆ. ಇದಕ್ಕೆ ನಮ್ಮ‌ ಅಭಿನಂದನೆ ಸಲ್ಲಿಸುತ್ತೇವೆ ಎಂದು ಕಟ್ಟಾ ಸುಬ್ರಮಣ್ಯ ನಾಯ್ಡು ತಿಳಿಸಿದರು.

Key words: bjp- former minister-kattasubramanya naidu-umesh katti