ರಾಮನಗರ, ನವೆಂಬರ್,12, 2022(www.justkannada.in): ನಿನ್ನೆ ನಡೆದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನ ಆಹ್ವಾನಿಸದಿರುವುದಕ್ಕೆ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ರಾಮನಗರದಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಕಾರ್ಯಕ್ರಮಕ್ಕೆ ಹೆಚ್. ಡಿ ದೇವೇಗೌಡರನ್ನ ಆಹ್ವಾನಿಸಿದ್ದೇವೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಮೊನ್ನೆ ರಾತ್ರಿ 9.30ಕ್ಕೆ ಕರೆ ಮಾಡಿದ್ದಾರೆ. ಲೆಟರ್ ಕೊಟ್ಟು ಹೋಗಿದ್ದಾರೆ ಆ ಲೆಟರ್ ನಲ್ಲಿ ದೇವೇಗೌಡರು ಎಂದು ಹೆಸರಿಲ್ಲ ಬರೀ ಮಾನ್ಯರೇ ಎಂಬುದಿತ್ತು. ದೇವೇಗೌಡರು ಮಲಗಿದ್ದಾಗ ಲೆಟರ್ ಕೊಟ್ಟು ಹೋಗಿದ್ದಾರೆ ಬಿಜೆಪಿಯವರು ಕನ್ನಡಿಗರನ್ನ ಗುಲಾಮರನ್ನಾಗಿ ಮಾಡುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಅವರ ಪಕ್ಷಕ್ಕೆ ನಾಗರಿಕತೆ ಇದೆಯಾ…? ಎಂದು ವಾಗ್ದಾಳಿ ನಡೆಸಿದರು.
ರಾಜಕಾರಣಕ್ಕಾಗಿ ಪ್ರತಿಮೆ ಲೋಕಾರ್ಪಣೆ ಮಾಡಿದ್ದಾರೆ. ಹಳ್ಳಿ ಹಳ್ಳಿಯಲ್ಲಿ ಜನ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡುತ್ತಾರೆ. ಸರ್ಕಾರದ ಹಣ ಖರ್ಚು ಮಾಡಿ ಪ್ರತಿಮೆ ನಿರ್ಮಾಣ ಮಾಡಬೇಕಾದ್ರೆ ಎಲ್ಲರನ್ನೂ ಕರೆಯಬೇಕಾದ್ದು ಧರ್ಮ. ಪಕ್ಷದ ಕಾರ್ಯಕ್ರಮವಾಗಿದ್ದರೇ ಸುಮ್ಮನಿರುತ್ತಿದ್ದೆ. ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮತ ಪಡೆಯಬಹುದು ಎಂದು ತಿಳಿದಿದ್ದೀರಾ..? ಯಾವ ಕಲ್ಲಿಗೆ ಯಾವ ಹಕ್ಕಿ ಬೀಳುತ್ತೆ ಎಂದು ಜನ ನಿರ್ಧರಿಸುತ್ತಾರೆ ಎಂದು ಹೆಚ್.ಡಿಕೆ ಟಾಂಗ್ ನೀಡಿದರು.
Key words: BJP –Former PM-HD Devegowda-Former CM-HD Kumaraswamy