ಮೈಸೂರು,ಜನವರಿ,4,2020(www.justkannada.in): ಕೇಂದ್ರ ಬಿಜೆಪಿ ಮತ್ತು ರಾಜ್ಯ ಬಿಜೆಪಿ ಇಡೀ ದೇಶವನ್ನ ಸಾಲದ ಕೂಪಕ್ಕೆ ತಳ್ಳುವ ಕೆಲಸ ಮಾಡುತ್ತಿವೆ. ಬಿಜೆಪಿ ಸರ್ಕಾರ ಬಂದ ಮೇಲೆ 53 ಲಕ್ಷ ಕೋಟಿ ಹೆಚ್ವುವರಿ ಸಾಲ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ ಮಾಡಿದರು.
ಮೈಸೂರಿನಲ್ಲಿ ಇಂದು ಸುದ್ಧಿಗೊಷ್ಠಿ ನಡೆಸಿ ಮಾತನಾಡಿದ ಎಂ. ಲಕ್ಷ್ಮಣ್, ಜೂನ್ 2014 ಕ್ಕೆ ನಮ್ಮ ದೇಶದ ಸಾಲ 54 ಲಕ್ಷ ಕೋಟಿ. ಈಗ 2020 ಡಿಸೆಂಬರ್ ವೇಳೆಗೆ 107 ಲಕ್ಷ ಕೋಟಿ ಆಗಿದೆ. ಬಿಜೆಪಿ ಸರ್ಕಾರ ಬಂದ ಮೇಲೆ 53 ಲಕ್ಷ ಕೋಟಿ ಹೆಚ್ವುವರಿ ಸಾಲ ಮಾಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿದ್ದರಾಮಯ್ಯ 5 ವರ್ಷಕ್ಕೆ 90 ಸಾವಿರ ಕೋಟಿ ಸಾಲ ಮಾಡಿದ್ದರು. ಬಿಎಸ್ ಯಡಿಯೂರಪ್ಪ 1.2 ಲಕ್ಷ ಸಾಲವನ್ನ ಒಂದೂವರೆ ವರ್ಷದಲ್ಲೇ ಮಾಡಿದ್ದಾರೆ. ಸಿದ್ದರಾಮಯ್ಯ 90 ಸಾವಿರ ಕೋಟಿ ಮಾಡಿದ್ದನ್ನೇ ಊರ ತುಂಬಾ ಬಿಜೆಪಿ ಹೇಳಿಕೊಂಡು ಬಂದಿದ್ದರು ಎಂದು ಕಿಡಿಕಾರಿದರು.
ಬಿಎಸ್ ವೈ ರಿಮೋಟ್ ಕಂಟ್ರೋಲ್ ನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ….
ರಾಜ್ಯ ಬಿಜೆಪಿ ಉಸ್ತುವಾರಿಯನ್ನ ಯಡಿಯೂರಪ್ಪ ರಿಮೋಟ್ ಕಂಟ್ರೋಲ್ ನಲ್ಲಿ ಇಟ್ಟುಕೊಂಡಿದ್ದಾರೆ. ಅವರು ಕೇವಲ ಬಂದ ಪುಟ್ಟ ಹೋದ ಪುಟ್ಟ ಅಂತ ಇದ್ದಾರೆ. ಬಿಜೆಪಿ ಉಸ್ತುವಾರಿಯನ್ನ ಯಡಿಯೂರಪ್ಪ ಕುಟುಂಬ ಕಂಟ್ರೋಲ್ ಮಾಡ್ತಿದ್ದಾರೆ ಎಂದು ಎಂ.ಲಕ್ಷ್ಮಣ್ ಲೇವಡಿ ಮಾಡಿದರು.
ಸಚಿವರ ಬಗ್ಗೆ ಮಾಧ್ಯಮಗಳೇ ಸಮೀಕ್ಷೆ ಮಾಡಿದ್ದಾರೆ. ಅದರ ಪ್ರಕಾರ ಸಚಿವರು ಕೇವಲ 30% ತೆಗೆದುಕೊಂಡಿದ್ದಾರೆ. ಇವರೆಲ್ಲ ಸಂಪೂರ್ಣ ಫೇಲ್ ಆಗಿದ್ದಾರೆ. ಎಸ್ ಎಸ್ ಎಲ್ ಸಿ ಪಾಸ್ ಆಗಬೇಕಿದ್ರೂ 25 % ರಷ್ಟು ತೆಗೆದುಕೊಳ್ಳಬೇಕು. ಇವರು ಫೇಲ್ ಆಗಿರೋ ಬಗ್ಗೆ ಮಾಧ್ಯಮಗಳೆ ಸಮೀಕ್ಷೆ ಮಾಡಿ ಹೇಳಿದ್ದಾರೆ ಎಂದು ಕುಟುಕಿದರು.
ಮೈಸೂರಿನ ಯಾವುದೇ ಕ್ಷೇತ್ರದಲ್ಲಿ 20 ಪಂಚಾಯತಿಯಲ್ಲಿ ಬಿಜೆಪಿ ಚುಕ್ಕಾಣಿ ಹಿಡಿಯಲಿ…
ಗ್ರಾ.ಪಂ ಚುನಾವಣೆಯಲ್ಲಿ ಮೈಸೂರಿನ ಯಾವುದೇ ಕ್ಷೇತ್ರದಲ್ಲಿ 20 ಪಂಚಾಯತಿಯಲ್ಲಿ ಬಿಜೆಪಿ ಚುಕ್ಕಾಣಿ ಹಿಡಿಯಲಿ. ಎಲ್ಲಾ ಕಡೆ ನಾವೇ ಗೆದ್ದಿದ್ದೇವೆ ಅಂತ ಬಿಜೆಪಿಯವರು ಹೇಳಿಕೊಂಡು ಓಡಾಡುತ್ತಿದ್ದಾರೆ. ಹುಣಸೂರಿನಲ್ಲಿ 41 ಪಂಚಾಯ್ತಿ ಪೈಕಿ ಸ್ವತಂತ್ರ್ಯವಾಗಿ 33ಕ್ಕೂ ಹೆಚ್ಚು ಪಂಚಾಯತಿಯಲ್ಲಿ ಕಾಂಗ್ರೆಸ್ ಚುಕ್ಕಾಣಿ ಹಿಡಿಯುತ್ತೇವೆ. ಆದರೆ ಬಿಜೆಪಿಯವರು ಹಳ್ಳಿಯಿಂದ ದಿಲ್ಲಿವರೆಗೂ ನಾವೇ ಅಂತಾ ಹೇಳುತ್ತಿದ್ದಾರೆ ಎಂದು ಎಂ. ಲಕ್ಷ್ಮಣ್ ಟಾಂಗ್ ನೀಡಿದರು.
ಬಿಜೆಪಿ ಹೇಗಾದರೂ ಹಾಳಗಲಿ ಮೊದಲು ಸಚಿವ ಸಂಪುಟ ವಿಸ್ತರಣೆ ಮಾಡಿ…
ಬಿಜೆಪಿ ಹೇಗಾದರೂ ಹಾಳಗಲಿ ಮೊದಲು ಸಚಿವ ಸಂಪುಟ ವಿಸ್ತರಣೆ ಮಾಡಿ. ಹಲವು ಇಲಾಖೆಯಲ್ಲಿ ಕೆಲಸಗಳು ಆಗುತ್ತಿಲ್ಲ. ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇಲಾಖೆಗಳ ಕೆಲಸ ವೈಖರಿಗಳ ಬಗ್ಗೆ ಏನು ತಿಳಿಯುತ್ತಿಲ್ಲ. ಸರ್ಕಾರ ಭ್ರಷ್ಟಾಚಾರದಲ್ಲೆ ತೊಡಗಿಕೊಂಡಿದೆ. ಯಾವ ಇಲಾಖೆಯಲ್ಲಿ ಏನೆಲ್ಲ ಮಾಡಿದ್ದಿರಾ ಅನ್ನೊದರ ಶ್ವೇತ ಪತ್ರ ನೀಡಿ ಎಂದು ಎಂ.ಲಕ್ಷ್ಮಣ್ ಆಗ್ರಹಿಸಿದರು.
Key words: BJP government – come – additional loan -Rs 53 lakh crore-mysore- KPCC spokesperson- M. Laxman