ಮಂಗಳೂರು,ಅ,18,2019(www.justkannada.in): ಬಿಜೆಪಿ ಸರ್ಕಾರ ಡಿಸೆಂಬರ್ ವರೆಗೆ ಇದ್ರೆ ಹೆಚ್ಚು. ಡಿಸೆಂಬರ್ ನಂತರ ರಾಜ್ಯದಲ್ಲಿ ಚುನಾವಣೆ ಬರುವುದು ಖಚಿತ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಭವಿಷ್ಯ ನುಡಿದರು.
ಮಂಗಳೂರಿನಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಸಿದ್ಧರಾಮಯ್ಯ, ಬಿ.ಎಸ್.ವೈ ಅವರನ್ನು ಸಿಎಂ ಮಾಡಲು ಬಿಜೆಪಿಗೆ ಇಷ್ಟವಿರಲಿಲ್ಲ. ಅನಿವಾರ್ಯ ಕಾರಣಗಳಿಂದಷ್ಟೇ ಸಿಎಂ ಮಾಡಿದ್ದಾರೆ. ಬಿಎಸ್ ಯಡಿಯೂರಪ್ಪ ಸಾಂದರ್ಭಿಕ ಶಿಶು ಅಷ್ಟೇ ಎಂದು ವ್ಯಂಗ್ಯವಾಡಿದರು.
ಇದೇ ವೇಳೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬಗ್ಗೆ ಲೇವಡಿ ಮಾಡಿದ ಸಿದ್ಧರಾಮಯ್ಯ, ನಳೀನ್ ಕುಮಾರ್ ಗೆ ಅವರಿಗೆ ಜ್ಞಾನವಿಲ್ಲ. ಬಿ.ಎಲ್. ಸಂತೋಷ್ ಅವರು ಸ್ವಿಚ್ ಆನ್ ಮಾಡಿದ್ರೆ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕುಣಿಯುತ್ತಾರೆ. ಬಿ.ಎಲ್.ಸಂತೋಷ್ ರಿಮೋಟ್ ಮೂಲಕ ಕೆಲಸ ಮಾಡಿಸುತ್ತಾರೆ. ನಳಿನ್ ಕುಮಾರ್ 34 ಜಿಲ್ಲೆ ಅಂತ ಹೇಳಿಕೆ ವಿಚಾರ. ನಳಿನ್ ಕುಮಾರ್ ಕಟೀಲು ಅವರಿಗೆ ರಾಜ್ಯ ಬಗ್ಗೆ ಏನೂ ಗೊತ್ತಿಲ್ಲ. ಅವರಿಗೆ ಮಂಗಳೂರು ಮಾತ್ರ ಗೊತ್ತು. ಮಂಗಳೂರು ಬಿಟ್ಟು ಏನೂ ಅವರಿಗೆ ಗೊತ್ತಿಲ್ಲ. ನಳಿನ್ ಕನಿಷ್ಟ ಜ್ಞಾನ ಕೂಡ ಇಲ್ಲದವರು ಎಂದು ಟೀಕಿಸಿದರು.
ಮಹಾರಾಷ್ಟ್ರಕ್ಕೆ ಕರ್ನಾಟಕದ ನೀರು ಹರಿಸುವುದಾಗಿ ಸಿಎಂ ಬಿಎಸ್ ವೈ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಚುನಾವಣೆಗಾಗಿ ನೀರು ಬಿಡುತ್ತೇವೆ ಅಂತ ಹೇಳಿರಬಹುದು ಅಷ್ಟೇ. ಎರಡು ರಾಜ್ಯದ ನಡುವೆ ಮಾತುಕತೆ ಯಾಗದೇ ಹಾಗೇ ಏನು ಮಾಡಲು ಆಗುವುದಿಲ್ಲ ಎಂದರು.
ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ, ಬಿಜೆಪಿ ಸರಕಾರವನ್ನು ಯಾರು ಕೇಳುವವರು, ಹೇಳುವವರು ಇಲ್ಲಸರಕಾರದಿಂದ ವರ್ಗಾವಣೆ ದಂಧೆಯಾಗುತ್ತಿದೆ ಅಷ್ಟೇ, ಬೇರೆ ಏನು ಪ್ರಗತಿ ಆಗುತ್ತಿಲ್ಲ. ಪ್ರವಾಹ ಬಂದಿರುವಲ್ಲಿ ಸರಿಯಾಗಿ ಕೆಲಸ ಆಗುತ್ತಿಲ್ಲ.ಎಲ್ಲರೂ ಮಹಾರಾಷ್ಟ್ರ ಮನೆಯಲ್ಲಿ ನೆಮ್ಮದಿಯಾಗಿ ಇದ್ದಾರೆ. ಸರಕಾರ ಸಂಪೂರ್ಣ ಹದಗೆಟ್ಟು ಹೋಗಿದೆ. ಬಿಜೆಪಿಗೆ ಅಪರೇಷನ್ ಕಮಲ ಬಿಟ್ಟು ವಿಚಾರ ಬೇರೆ ಇಲ್ಲ. ನಮ್ಮವರನ್ನ ಹಣ ಕೊಟ್ಟು ಖರೀದಿ ಮಾಡುತ್ತಾರೆ. ಆಪರೇಷನ್ ಮಾಡಲು ನಮ್ಮ ತೆರಿಗೆ ಹಣವ್ಯಯ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದರು.
Key words: BJP government – December- election -former CM –Siddaramaiah-predict