ಚಾಮರಾಜನಗರ,ಸೆ,9,2019(www.justkannada.in): ಬಿಜೆಪಿ ಸರ್ಕಾರಕ್ಕೆ ಬಹುಮತವಿಲ್ಲ. ಹೀಗಾಗಿ ಆರು ತಿಂಗಳಲ್ಲೆ ಮತ್ತೆ ಚುನಾವಣೆ ಬರುತ್ತದೆ ಎಂದು ಮಾಜಿ ಸಂಸದ ಧೃವನಾರಾಯಣ್ ತಿಳಿಸಿದರು.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಮಾತನಾಡಿದ ಮಾಜಿ ಸಂಸದ ಧ್ರುವನಾರಾಯಣ್ ಬಿಜೆಪಿ ಸರ್ಕಾರಕ್ಕೆ ಬಹುಮ ತವಿಲ್ಲ.ಕಾನೂನಾತ್ಮಕವಾಗಿ ಬಿಜೆಪಿ ಸರ್ಕಾರ ರಚನೆಯಾಗಿಲ್ಲ. ಹೀಗಾಗಿ ಆರು ತಿಂಗಳಲ್ಲಿ ಚುನಾವಣೆ ಬರುತ್ತದೆ ಎಂದರು.
ಸರ್ಕಾರದಲ್ಲಿ ಜಾತಿಗೊಂದು ಡಿಸಿಎಂ ಹುದ್ದೆ ಸೃಷ್ಠಿಸುವ ಕೆಲಸ ಮಾಡು ತ್ತಿದ್ದಾರೆ. ಡಿಸಿಎಂ ಹುದ್ದೆ ಮೂಲಕ ಜನಾಂಗದ ಒಲೈಕೆ ರಾಜಕಾರಣ ನಡೀತಿದೆ. ಅಶ್ವಥ್ ನಾರಾಯಣ, ಲಕ್ಷ್ಮಣ ಸವದಿ ಕೆಲವು ಶಾಸಕರನ್ನು ರಾ ಜೀನಾಮೆ ಕೊಡಿಸುವಲ್ಲಿ ಮು ಖ್ಯ ಪಾತ್ರ ವಹಿಸಿದ್ದರು. ಇದ್ರಿಂದ ಇವರಿಗೆ ಡಿಸಿಎಂ ಹುದ್ದೆ ನೀಡಲಾಗಿದೆ. ಈ ಸರ್ಕಾರ ಮುಂದುವರೆಯೋದು ಅನುಮಾನ ಎಂದರು.
Key worsds: BJP- government -does not – majority- former MP -Dhruvanarayan,