ಬೆಂಗಳೂರು:ಜೂ-16:(www.justkannada.in) ಜಿಂದಾಲ್ ಭೂ ಪರಭಾರೆ ಹಾಗೂ ಐಎಂಎ ಜ್ಯುವೆಲರಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಯಾಕೆ ಯಾವುದೇ ಉತ್ತರ ನೀಡದೇ ಮೌನವಾಗಿದ್ದಾರೆ? ಸತ್ಯ ಹೇಳಲು ಅವರಿಗೆ ಬಾಯಿಯಿಲ್ಲವೇ ಎಂದು ಬಿಜೆಪಿ ಮುಖಂದ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನದೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ, ಡ್ಯಾನ್ಸ್ ಮಾಡಿ, ತೊಡೆ ತಟ್ಟಿ ರಾಜ್ಯದ ಆಸ್ತಿ ಉಳಿಸೋರು ನಾವೇ ಎಂದರು. ಆದರೆ 3,667 ಎಕರೆ ಸರ್ಕಾರಿ ಭೂಮಿ ವಿಚಾರದಲ್ಲಿ ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಪ್ರಶ್ನಿಸ್ನಿಸಿದರು.
ಜಿಂದಾಲ್ ವಿಚಾರದಲ್ಲಿ ಉನ್ನತ ಮಟ್ಟದ ರಾಜಕಾರಣಿಗಳು ಭಾಗಿದಾರರಾಗಿದ್ದಾರೆ. ಕಾಂಗ್ರೆಸ್ನ ಅನೇಕರು ಜಿಂದಾಲ್ಗೆ ಭೂಮಿ ಕೊಡಬಾರದು ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ತನಗೆ ಸತ್ಯ ಹೇಳೋಕೆ ಅವಕಾಶ ಇಲ್ಲ ಎನ್ನುತ್ತಾರೆ. ಸಚಿವ ಡಿ.ಕೆ ಶಿವಕುಮಾರ್ ಜೋರು ಜೋರಾಗಿ ವಾದ ಮಾಡುತ್ತಾರೆ. ಸಿದ್ದರಾಮಯ್ಯ ಹೇಳಲಿ ಡಿಕೆಶಿ ಕಿಕ್ಬ್ಯಾಕ್ ಪಡಿತಾರಾ ಎಂದು.
ಹಿಂದೆ ಜಾರ್ಜ್ ಯಾವುದೇ ಕಾರಣಕ್ಕೂ ಭೂಮಿ ಕೊಡಬಾರದು ಎಂದು ಹೇಳಿದ್ದರು ಆದರೀಗ ಕೊಡಬೇಕು ಎನ್ನುತ್ತಿದ್ದಾರೆ. ಜಿಂದಾಲ್ ಹಾಗೂ ಐಎಂಎ ಅನ್ನು ಸಿಬಿಐ ತನಿಖೆಗೆ ಕೊಡಿ. ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಮೌನ ಮುರಿಯಲಿ. ಜಿಂದಾಲ್ಗೆ ಭೂಮಿ ಕೊಡಲು ವ್ಯವಸ್ಥಿತ ಪಿತೂರಿ ನಡೆದಿದೆ. ಸಾಕಷ್ಟು ಕಿಕ್ಬ್ಯಾಕ್ ವ್ಯವಹಾರ ನಡೆದಿದೆ. ಮೊದಲು ಜಿಂದಾಲ್ನವರಿಗೆ ಕೊಟ್ಟಿರುವ ಜಮೀನು ವಾಪಸ್ ಪಡೆಯಲಿ ಎಂದು ಆಗ್ರಹಿಸಿದರು.