ಮೈಸೂರು,ಏಪ್ರಿಲ್,1,2024 (www.justkannada.in): ಅಭಿವೃದ್ಧಿ ವಿಚಾರವಾಗಿ ಪ್ರಧಾನಿ ಮೋದಿ ಹೇಳಿಕೆಗೆ ಟಾಂಗ್ ನೀಡಿರುವ ಸಿಎಂ ಸಿದ್ದರಾಮಯ್ಯ, ಅಭಿವೃದ್ಧಿ ಆಗಿದ್ರೆ ತಾನೇ ಟ್ರೇಲರ್. ಸುಳ್ಳಿನ ಪಿಕ್ಚರ್ ಅವರದ್ದು ಬಾಕಿ ಇರಬಹುದು. ಇಲ್ಲಿವರೆಗೆ ಹೇಳಿರುವುದೆಲ್ಲಾ ಸುಳ್ಳು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅವರು 200 ಕ್ಷೇತ್ರ ಮಾತ್ರ ಗೆಲ್ಲೋದು ಎಂದು ಭವಿಷ್ಯ ನುಡಿದರು.
ಇಂದು ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಡಿಮೆ ಸ್ಥಾನ ಬರುತ್ತದೆ ಎಂದು ಗೊತ್ತಾದ ಮೇಲೆಯೇ ಹೆಚ್ಚು ಸ್ಥಾನ ಬರುತ್ತೇವೆಂದು ಬಿಂಬಿಸುವ ಪ್ರಯತ್ನವನ್ನ ಬಿಜೆಪಿಯವರು ಮಾಡುತ್ತಿದ್ದಾರೆ. ಇದು ಕೂಡ ಅವರ ತಂತ್ರಗಾರಿಕೆ ಕರ್ನಾಟಕದಲ್ಲಿ ನನಗೆ ವಿಶ್ವಾಸ ಇದೆ. 18 ರಿಂದ 20 ಸ್ಥಾನ ಗೆಲ್ಲುತ್ತೇವೆ. ಅವರು ಸಹ ಸರ್ವೆ ಮಾಡಿಸಿದ್ದಾರೆ. ಅವರು ಗೆಲ್ಲೋದೆ 200 ಕ್ಷೇತ್ರ ಮಾತ್ರ. ಈ ಭಾರಿ ಬಿಜೆಪಿಯ ಸುಳ್ಳಿಗೆ ಯಾರು ಸಹ ಮರಳಾಗುವುದಿಲ್ಲ. ಮೋದಿಯೂ ಬಂದು ಪ್ರಚಾರ ಮಾಡಲಿ. ವಿಧಾನಸಭೆಯಲ್ಲಿ ಮೋದಿ ಪ್ರಚಾರ ಮಾಡಿದ್ರು, ಆಗ ಏನಾಯಿತು ಎಂಬುದು ಗೊತ್ತಿದೆ. ಈಗಲೂ ಮಾಡಲಿ ಬಿಡಿ ಎಂದು ಲೇವಡಿ ಮಾಡಿದರು.
ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಆಗಿಲ್ಲ. ವಾಸ್ತವದಲ್ಲಿ ಏರಿಕೆ ಆಗಿದೆ.
ಗ್ಯಾ ಸಿಲಿಂಡರ್ ಬೆಲೆ ಇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಆಗಿಲ್ಲ. ವಾಸ್ತವದಲ್ಲಿ ಏರಿಕೆ ಆಗಿದೆ. ಹತ್ತು ವರ್ಷದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಏರಿಕೆ ಆಗಿದೆ. 10 ವರ್ಷದ ಹಿಂದೆ ಡೀಸೆಲ್, ಪೆಟ್ರೋಲ್ ಬೆಲೆ ಕಡಿಮೆ ಇತ್ತು. ಗ್ಯಾಸ್ ಸಿಲಿಂಡರ್ 450 ರೂ. ಇತ್ತು. ಈಗ ಡೀಸೆಲ್ ಬೆಲೆ 92 ರೂ., ಪೆಟ್ರೋಲ್ 101 ರೂ. ಇದೆ. ಗ್ಯಾಸ್ ಸಿಲಿಂಡರ್ 950 ರೂ. ಆಗಿದೆ. ಹೆಚ್ಚಾಯ್ತೋ ಕಡಿಮೆ ಆಯ್ತೋ ? ಈಗ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
Key words: BJP, lies, CM, Siddaramaiah.