ಕಲಬುರಗಿ,ಡಿಸೆಂಬರ್,28,2024 (www.justkannada.in) ಗುತ್ತಿಗೆದಾರ ಸಚಿವ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ರಾಜೀನಾಮೆಗೆ ಆಗ್ರಹಿಸಿದ ಬಿಜೆಪಿಗೆ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರಿಗೆ ರಾಜೀನಾಮೆ ಕೇಳೋದೆ ಒಂದು ಫ್ಯಾಷನ್ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.
30 ಕೇಸ್ ಗಳು ಯಾರ ಅವಧಿಯಲ್ಲಿ ದಾಖಲಾಗಿವೆ? ಕಂಪನಿ ಮತ್ತು ಗುತ್ತಿಗೆದಾರ ಸಚಿನ್ ವ್ಯವಹಾರದ ಬಗ್ಗೆ ದಾಖಲೆ ಇದೆ. ಸಚಿನ್ ಕೇಸ್ ನಲ್ಲಿ ನಮ್ಮ ಪಾತ್ರ ಏನಿದೆ. ಪ್ರಿಯಾಂಕ್ ಖರ್ಗೆ ಪಾತ್ರದ ಬಗ್ಗೆ ಏನಾದ್ರು ಸಾಕ್ಷಿ ಇದೆಯಾ..? ಎಂದು ಪ್ರಶ್ನಿಸಿದರು.
ಮೊದಲು ಬಿಜೆಪಿಯರು ತಮ್ಮ ನಾಯಕರ ಇತಿಹಾಸ ತಿಳಿಯಲಿ. ಕಲಬುರಗಿಯಲ್ಲಿ ಬೆಟ್ಟಿಂಗ್ ಸ್ಯಾಂಡ್ ಮಾಫಿಯ ಆರೋಪ ಅವರ ಮೇಲೆ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟರು.
Key words: BJP, resign, fashion, Minister, Priyank Kharge