ಗೋವಾ,ಜನವರಿ,18,2022(www.justkannada.in): ರಾಜ್ಯದಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆ ವೀಕೆಂಡ್ ಕರ್ಫ್ಯೂ ನೈಟ್ ಕರ್ಫ್ಯು ನಂತಹ ಕಠಿಣ ನಿಯಮಗಳನ್ನ ಜಾರಿ ಮಾಡಲಾಗಿದ್ದು ಇದಕ್ಕೆ ಸ್ವತಃ ಬಿಜೆಪಿ ಶಾಸಕರೇ ಆಗಿರುವ ಸಿ.ಟಿ ರವಿ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಗೋವಾದ ಪಣಜಿಯಲ್ಲಿ ಮಾತನಾಡಿರುವ ಶಾಸಕ ಸಿ.ಟಿ ರವಿ, ಸೋಂಕಿನ ವೇಗ ಹೆಚ್ಚಿದೆ. ಆದರೆ ಪ್ರಾಣಾಪಾಯವಿಲ್ಲ. ಐಸಿಯು ವೆಂಟಿಲೇಟರ್ ಗೆ ಹೋಗುವವರ ಸಂಖ್ಯೆ ಕಡಿಮೆ ಇದೆ. 3ನೇ ಅಲೆ ಎಫೆಕ್ಟ್ ಕಡಿಮೆ ಇದೆ. ಕರ್ಫ್ಯೂ ಲಾಕ್ ಡೌನ್ ನಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ ಮಾಡಿ ಜನರನ್ನೇಕೆ ಕಷ್ಟಕ್ಕೆ ದೂಡಬೇಕು ಕರ್ಫ್ಯೂ ಬದಲು ಕೆಲ ನಿಯಮಗಳನ್ನ ಜಾರಿ ಮಾಡಲಿ ಎಂದು ಸಲಹೆ ನೀಡಿದ್ದಾರೆ.
ನಿನ್ನೆಯಷ್ಟೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು ಅಧಿಕಾರಿಗಳು, ತಜ್ಞರ ಜತೆ ತುರ್ತು ಸಭೆ ನಡೆಸಿ ಚರ್ಚಿಸಿದ್ದರು. ಇನ್ನು ವೀಕೆಂಡ್ ಕರ್ಫ್ಯೂ ನೈಟ್ ಕರ್ಫ್ಯೂ ಬಗ್ಗೆ ಶುಕ್ರವಾರ ನಿರ್ಧಾರವಾಗಲಿದೆ.
Key words: BJP- MLA-CT Ravi- Opposes – Weekend Curfew