ಬೆಂಗಳೂರು,ಆಗಸ್ಟ್,12,2021(www.justkannada.in): ತಮ್ಮ ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧವೇ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ತಿರುಗಿಬಿದ್ದಿದ್ದಾರೆ.
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ರಾಜ್ಯ ಸರ್ಕಾರದ ವಿರುದ್ಧ ಶಾಸಕ ಎಂ.ಪಿ ಕುಮಾರಸ್ವಾಮಿ ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಧ್ವನಿಗೆ ನಮ್ಮ ಸರ್ಕಾರದಲ್ಲೇ ಯಾಕೋ ಬೆಲೆ ಸಿಗ್ತಿಲ್ಲ. ಮೀಸಲು ಕ್ಷೇತ್ರವೆಂಬ ಕಾರಣಕ್ಕೋ ಏನೋ ಕಡೆಗಣಿಸ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏಕಾಂಗಿ ಪ್ರತಿಭಟನೆಗೆ ಕುಳಿತ ಶಾಸಕ ಎಂಪಿ ಕುಮಾರಸ್ವಾಮಿ ಮನವೊಲಿಸಲು ಕಂದಾಯ ಸಚಿವ ಆರ್.ಅಶೋಕ್ ಯತ್ನಿಸಿದರು. ಆದರೆ ಸಚಿವ ಆರ್.ಅಶೋಕ್ ಮನವೊಲಿಕೆಗೆ ಶಾಸಕ ಎಂಪಿ ಕುಮಾರಸ್ವಾಮಿ ಬಗ್ಗಲಿಲ್ಲ. ಆ ಪ್ರಯತ್ನ ವಿಫಲವಾದ ಬೆನ್ನಲ್ಲೇ ಮಾಜಿ ಶಾಸಕ ಡಿ ಎನ್ ಜೀವರಾಜ್ ಸ್ಥಳಕ್ಕಾಗಮಿಸಿ, ಪ್ರತಿಭಟನಾನಿರತ ಶಾಸಕ ಕುಮಾರಸ್ವಾಮಿ ಮನವೊಲಿಸುವ ಪ್ರಯತ್ನ ಮಾಡಿದರು.
ENGLISH SUMMARY….
BJP MLA demonstrates lonely against State Government
Bengaluru, August 12, 2021 (www.justkannada.in): Mudigere BJP MLA M.P. Kumaraswamy has revolted against his party alleging bias in distribution of funds to his constituency.
MLA M.P. Kumaraswamy is demonstrating lonely in front of the Gandhi statue at the Vidhana Soudha. He alleged that the party is not listening to his voice. “I am being neglected may be because my constituency is considered as reserved,” he alleged.
Revenue Minister R. Ashok was found to be convincing the BJP MLA M.P. Kumaraswamy who is demonstrating alone. However, Kumaraswamy appeared not to budge. Following this former MLA D.N. Jeevaraj arrived at the spot and started convincing him.
Keywords: Mudigere/ BJP MLA/ demonstrate/ lonely/ Vidhana Soudha
Key words: BJP- MLA- MP Kumaraswamy-protest-against – state government