ಬಿಜೆಪಿ ಶಾಸಕ ಮುನಿರತ್ನ ನಾಯ್ಡು ವಿರುದ್ಧ FIR, ಬಂಧನ ಭೀತಿ.!

An FIR has been registered against BJP MLA Muniratna Naidu from Rajarajeshwari Nagar for allegedly demanding a bribe from a BBMP contractor, using abusive language, and threatening him with murder. The FIR was filed at the Vyalikaval police station based on a complaint by BBMP contractor Cheluvaraju against MLA Muniratna Naidu and two of his close aides.

 

The FIR was filed at the Vyalikaval police station based on a complaint by BBMP contractor Cheluvaraju against MLA Muniratna Naidu and two of his close aides.

ಬೆಂಗಳೂರು, ಸೆ.14,2024: (www.justkannada.in news) ಬಿಬಿಎಂಪಿ ಗುತ್ತಿಗೆದಾರನಿಗೆ ಲಂಚಕ್ಕಾಗಿ ಬೇಡಿಕೆ ಇಟ್ಟು ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ವಿರುದ್ಧ ಎಫ್ ಐಆರ್ ದಾಖಲು.

ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ನೀಡಿರುವ ದೂರಿನ ಮೇರೆಗೆ ಶಾಸಕ ಮುನಿರತ್ನ ನಾಯ್ಡು ಹಾಗೂ ಇಬ್ಬರು ಆಪ್ತ ಸಹಾಯಕ‌ವಿರುದ್ದ ‌ವೈಯಾಲಿ ಕಾವಲ್ ಪೊಲೀಸ್‌  ಠಾಣೆಯಲ್ಲಿ ಎಫ್ ಐಆರ್ ದಾಖಲು.

ವಂಚನೆ ಮಾಡಿರುವ ಹಾಗೂ ಕೊಲೆ ಬೆದರಿಕೆ ಆರೋಪದಡಿ ಎಫ್ ಐಆರ್. ೨೦ ಲಕ್ಚ ರೂ. ಹಣ ಪಡೆದು ಮೋಸಮಾಡಿದ್ದಾರೆಂದು ಆರೋಪ. ನಿನ್ನೆಯಷ್ಟೆ ಸುದ್ದಿಗೋಷ್ಠಿ ಮಾಡಿ ಗುತ್ತಿಗೆದಾರ ಚೆಲುವರಾಜು ಅವರಿಂದ ಈ ಬಗ್ಗೆ ಆರೋಪ. ಇದರ ಆಧಾರದ ಮೇಲೆ ಮುನಿರತ್ನ ವಿರುದ್ಧ ಎಫ್ ಐಆರ್ ದಾಖಲಿಸಿದ ಪೊಲೀಸರು.

 ಸಿಎಂ ಪ್ರತಿಕ್ರಿಯೆ:

ಈ ಘಟನೆ ಬಗ್ಗೆ ಟ್ವೀಟರ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿ ಶಾಸಕ ಮುನಿರತ್ನ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ, ಕೊನೆಗೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇವೆಲ್ಲವೂ ಅತ್ಯಂತ ಗಂಭೀರ ಸ್ವರೂಪದ ಅಪರಾಧಗಳಾಗಿವೆ. 40% ಕಮಿಷನ್‌ ಸರ್ಕಾರ ತೊಲಗಿದರೂ ಅದರಿಂದ ಹುಟ್ಟಿರುವ ರಕ್ತಬೀಜಾಸುರರು ಉಳಿದಿದ್ದಾರೆ. ಈಗ ನಾವು ಕೈಗೆತ್ತಿಕೊಂಡಿರುವ ಸ್ವಚ್ಚತಾ ಅಭಿಯಾನದಲ್ಲಿ ಈ ಹೊಲಸನ್ನು ಎಲ್ಲಿ ಇಡಬೇಕು ಅಲ್ಲಿಗೆ ಖಂಡಿತಾ ತಲುಪಿಸುತ್ತೇವೆ ಎಂದು ಖಡಕ್‌ ವಾರ್ನಿಂಗ್‌ ನೀಡಿದ್ದಾರೆ.

key words: FIR, against, BJP MLA, Muniratna Naidu, fear of arrest.

SUMMARY:

An FIR has been registered against BJP MLA Muniratna Naidu from Rajarajeshwari Nagar for allegedly demanding a bribe from a BBMP contractor, using abusive language, and threatening him with murder.

 

ಲಂಚಕ್ಕಾಗಿ ಬೇಡಿಕೆ : ಬಿಬಿಎಂಪಿ ಗುತ್ತಿಗೆದಾರನ ಹೆಂಡತಿಯನ್ನು ಮಂಚಕ್ಕೆ ಕರೆದ ಬಿಜೆಪಿ ಶಾಸಕ ಮುನಿರತ್ನ..!

The FIR was filed at the Vyalikaval police station based on a complaint by BBMP contractor Cheluvaraju against MLA Muniratna Naidu and two of his close aides.