ಹುಬ್ಬಳ್ಳಿ,ಮೇ,14,2019(www.justkannada.in): ಹಲವು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ‘ಕಾಂಗ್ರೆಸ್‌ಗೆ ಹೋಗಲು ಬಿಜೆಪಿ ಶಾಸಕರಿಗೇನು ತಲೆ ಕೆಟ್ಟಿದೆಯೇ?’ ಎಂದು ಕೋಪದಲ್ಲಿ ಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಬಿಎಸ್ ಯಡಿಯೂರಪ್ಪ, ಬಿಜೆಪಿಯ ಒಬ್ಬನೇ ಒಬ್ಬ ಶಾಸಕ ಕೂಡ ಯಾವುದೇ ಪಕ್ಷ ಸೇರಿಕೊಳ್ಳುವುದಿಲ್ಲ. ಕುಮಾರಸ್ವಾಮಿ ಆಡಳಿತದಿಂದ ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನವಿದೆ. ಅಸಮಾಧಾನ ಹೊಂದಿರುವ ಕಾಂಗ್ರೆಸ್‌ನ 20ಕ್ಕೂ ಹೆಚ್ಚು ಶಾಸಕರು ಮೇ 23ರ ಬಳಿಕ ಪಕ್ಷದಲ್ಲಿ ಮುಂದುವರಿಯುವುದಿಲ್ಲ. ಮುಂದೇ ರಾಜ್ಯ ರಾಜಕೀಯದಲ್ಲಿ ಏನು ಬೇಕಾದ್ರೂ ಆಗಬಹುದು ಎಂದು ಹೇಳಿದರು.
ಕೆ.ಸಿ ವೇಣುಗೋಪಾಳ್ ಗೆ ಸವಾಲು…
ಕೆ.ಸಿ ವೇಣುಗೋಪಾಲ್ ಅವರಿಗೆ ಕರ್ನಾಟಕದ ಬಗ್ಗೆ ಏನು ಗೊತ್ತಿದೆ? ಕರ್ನಾಟಕದ ಯಾವ ಮೂಲೆಗೆ ಅವರು ಹೋಗಿ ಬಂದಿದ್ದಾರೆ? ಹೋಗಲಿ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷ ಎಷ್ಟು ಸೀಟುಗಳನ್ನು ಗೆಲ್ಲುತ್ತದೆ ಎಂದು ಗೊತ್ತಿದೆಯೇ? ತಾಕತ್ತಿದ್ದರೆ ಹೇಳಲಿ ಎಂದು ಬಿಎಸ್ ಯಡಿಯೂರಪ್ಪ ಸವಾಲು ಹಾಕಿದರು.
ಚೂರಿ ಹಾಕಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ದೋಸ್ತಿ ಸರ್ಕಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಒಬ್ಬರಿಗೊಬ್ಬರು ಚೂರಿ ಹಾಕಿದ್ದಾರೆ. ಜತೆಗೆ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ. ಎರಡೂ ಪಕ್ಷದರಿಗೆ ಲೋಕಸಭೆ ಚುನಾವಣೆಯಲ್ಲಿ ತಮಗೆ ಹಿನ್ನಡೆಯಾಗುವುದರ ಬಗ್ಗೆ ತಿಳಿದಿದೆ. ಅವರ ನಡುವಿನ ಕಿತ್ತಾಟ ಫಲಿತಾಂಶ ಪ್ರಕಟವಾದ ಬಳಿಕ ಉಲ್ಬಣವಾಗಲಿದೆ. ಮುಂದೆ ಏನು ಬೇಕಾದರೂ ಆಗಬಹುದು ಎಂದು ನುಡಿದರು.
Key words: BJP- MLAs -not – Congress-BS Yeddyurappa