ಡ್ರಗ್ಸ್ ದಂಧೆ ವಿಚಾರ: ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಎಂಎಲ್ ಸಿ ಹೆಚ್.ವಿಶ್ವನಾಥ್  

ಬೆಂಗಳೂರು,ಸೆಪ್ಟಂಬರ್,16,2020(www.justkannada.in): ರಾಜ್ಯದಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗಿ ಹರಡಿದ್ದು, ರಾಜ್ಯ ಪೋಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯರಾದ ಅಡಗೂರು ಹೆಚ್ ವಿಶ್ವನಾಥ್ ಹೇಳಿದ್ದಾರೆ.jk-logo-justkannada-logo

ಬೆಂಗಳೂರಿನಲ್ಲಿ ಇಂದು  ಮಾಧ್ಯಮಗಳ ಜತೆ ಮಾತನಾಡಿದ ಹೆಚ್. ವಿಶ್ವನಾಥ್ ಅವರು,  ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ತನ್ನ ಕಬಂಧ ಬಾಹುಗಳನ್ನು ಅವ್ಯಾಹತವಾಗಿ ಚಾಚಿದೆ.ಈ ದಂಧೆಯಲ್ಲಿ ರಾಜಕಾರಣಿ, ಸರ್ಕಾರದ ಉನ್ನತ ಅಧಿಕಾರಿ ಹಾಗೂ ದೊಡ್ಡ ಉದ್ಯಮಿಗಳ ಮಕ್ಕಳು ಶಾಮೀಲು ಆಗಿದ್ದಾರೆ. ಆದ ಕಾರಣ ಪೊಲೀಸ್ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಪೊಲೀಸರು ತನಿಖೆಯನ್ನು ಸರಿಯಾದ ರೀತಿಯಲ್ಲಿ ನಡೆಸುತ್ತ ಇಲ್ಲ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಅದರಿಂದ ರಾಜ್ಯ ಸರ್ಕಾರ ರಾಜ್ಯ ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಮೂರ್ತಿಗಳ ಮೂಲಕ ನ್ಯಾಯಾಂಗ ತನಿಖೆ ಮಾಡಿಸಬೇಕು ಎಂದು ಹೆಚ್. ವಿಶ್ವನಾಥ್ ರಾಜ್ಯ ಸರ್ಕಾರವನ್ನು ಅಗ್ರಹಿಸಿದ್ದಾರೆ.bjp-mlc-h-vishwanath-demanded-judicial-inquiry-drug-menace

ನ್ಯಾಯಾಂಗ ತನಿಖೆಯಿಂದ ಮಾತ್ರ ‌ಸತ್ಯವನ್ನು ಬಯಲಿಗೆ ತರಲು ಸಾಧ್ಯ. ಹಾಲಿ ನ್ಯಾಯಮೂರ್ತಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ತನಿಖೆ ನಡೆಸುತ್ತಾರೆ ಎಂದು  ಹೆಚ್ ವಿಶ್ವನಾಥ್ ಹೇಳಿದರು.

Summary…

BJP MLC and former minister H Vishwanath demanded Judicial Inquiry into drug menace in the state.

Expressing dissatisfaction over police investigation and alleged involvement of kith & kin of politicians, celebraties and officials, the former minister demanded that government appoint sitting Karnataka High Court Justice to head the Judicial Inquiry.

Key words: BJP -MLC – H Vishwanath –demanded- Judicial Inquiry -drug menace