ಮೈಸೂರು,ಡಿಸೆಂಬರ್,23,2021(www.justkannada.in) ಬೆಳಗಾವಿ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ರಾಜ್ಯ ಆಡಳಿತ ಪಕ್ಷ ಬಿಜೆಪಿ ಮಂಡನೆ ಮಾಡಿರುವ ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಎಂಎಲ್ ಸಿ ಹೆಚ್. ವಿಶ್ವನಾಥ್ ಹೇಳಿದ್ದಿಷ್ಟು.
12 ಶತಮಾನದಲ್ಲಿ ಸಮಾನತೆ ಬಗ್ಗೆ ಬಸವಣ್ಣ ಮಾನವ ಧರ್ಮ ಸ್ಥಾಪನೆ ಮಾಡಿದ್ರು. ಜಾತಿ ಧರ್ಮ ಭೇದವಿಲ್ಲದೆ ಸಮಾನತೆ ಬಗ್ಗೆ ಹೇಳಿದ್ರು. ಭಾರತ ಬಹುತ್ವವುಳ್ಳ ದೇಶ. ಅಂಬೇಡ್ಕರ್ ಸಂವಿಧಾನವನ್ನು ನೀಡಿದ್ದಾರೆ. ತಮ್ಮ ಇಷ್ಟ ಬಂದ ಧರ್ಮ, ದೇವರನ್ನು ಪೂಜೆ ಮಾಡಲು ಅವಕಾಶ ನೀಡಲಾಗಿದೆ. ಪ್ರಧಾನಿ ಮೋದಿ ಹಿಂದುತ್ವದ ಬಗ್ಗೆ ಎಲ್ಲಿಯೂ ಹೇಳಿಲ್ಲ. ದೇಶದ ಮಹನಿಯರು ಹೇಳಿರುವುದು ಸಹಬಾಳ್ವೆ ಬಗ್ಗೆಯೆ ಹೇಳಿರೋದು. ಬಸವೇಶ್ವರ ಕಟ್ಟಿದ ಮಾನವ ಧರ್ಮವನ್ನ ಮುಖ್ಯಮಂತ್ರಿ ಒಡೆಯುವ ಕೆಲಸವಾಗಿರೋದು ವಿಪರ್ಯಾಸ ಮುಖ್ಯಮಂತ್ರಿ ಹೆಸರು ಕೂಡ ಬಸವಣ್ಣನೇ. ಇದನ್ನು ಯಾರು ಮೆಚ್ಚುವುದಿಲ್ಲ. ಜಿಲ್ಲಾಧಿಕಾರಿಗಳಿಂದ ಜೈಲಿಗೆ ಹಾಕಿಸಲು ಸಾಧ್ಯವಾ. ಆರ್.ಎಸ್.ಎಸ್ ನಾಯಕರು ಮಕ್ಕಳು ಮುಸ್ಲಿಂರ ಮಕ್ಕಳನ್ನು ಮದುವೆಯಾಗಿದ್ದಾರೆ. ಇವರುಗಳನ್ನು ಜೈಲಿಗೆ ಹಾಕಲು ಸಾಧ್ಯವೇ?. ಸಿನಿಮಾ ನಟರು ಬ್ರಾಹ್ಮಣರನ್ನು ಮದುವೆಯಾಗಿದ್ದಾರೆ. ಇವರನ್ನ ಜೈಲಿಗೆ ಹಾಕಲು ಸಾಧ್ಯವಾ.?
ಕಾಂಗ್ರೆಸ್ ನವರು ಇಬ್ಬಗೆಯ ನಾಟಕವಾಡುತ್ತಿದ್ದಾರೆ. ನಾವು ಹೊರಗೆ ಇದ್ದಾಗ ಮಂಡನೆ ಮಾಡಿದ್ರು ಅಂತಾ ಹೇಳ್ತಾರೆ. ಮುಸ್ಲಿಂರ ಧಾರ್ಮಿಕ ಸ್ವಾತಂತ್ರ್ಯ ಕಾಪಾಡುತ್ತಿದ್ದೀರಾ? ದಲಿತರು ಮತಾಂತರ ಆಗಲೆ ಬಾರದು. ಧಾರ್ಮಿಕ ದಿಗ್ಬಂಧನ ಹಾಕಲಾಗುತ್ತಿದೆ. ದಿಗ್ಬಂದನ ಹೇರಲಾಗುತ್ತಿದೆ ಎಂದು ಹೆಚ್.ವಿಶ್ವನಾಥ್ ಹೇಳಿದರು.
ಈ ಕಾಯ್ದೆಯಿಂದ ರಾಜ್ಯ ಅಭಿವೃದ್ಧಿ ಆಗುತ್ತಾ. ಕಾಯ್ದೆ ಜಾರಿಗೆ ಇಷ್ಟೊಂದು ಅವಸರ ಯಾಕೆ.?
ತತ್ವವನ್ನ ಅಳವಡಿಸಿಕೊಂಡಿರುವ ಮಠಾಧಿಶರು ಯಾರು ಮಾತನಾಡುತ್ತಿಲ್ಲ. ಚಿತ್ರದುರ್ಗದ ಮಠದವರು ಬಾಯಿ ಮುಚ್ಚಿ ಕುಳಿತಿದ್ದಾರೆ. ಅಹಿಂದ ಮಠಗಳು ಈ ಬಗ್ಗೆ ಮಾತನಾಡುತ್ತಿಲ್ಲ. ನಿಮ್ಮ ಬಾಯಿ ಕಟ್ಟಿರುವುದು ಯಾರು.? ಈ ಬಗ್ಗೆ ಸಾಹಿತಿಗಳು ಚಿಂತಕರು ಬಾಯಿ ಬಿಡುತ್ತಿಲ್ಲ. ಇವರು ರಾಜ್ಯೋತ್ಸವ ಪ್ರಶಸ್ತಿಗಷ್ಟೆ ಸೀಮಿತವಾ.? ಮಠಮಾನ್ಯಗಳನ್ನ ಭೇಟಿ ಮಾಡಿ, ಎಲ್ಲಾ ಧರ್ಮದ ಸ್ವಾಮಿಗಳನ್ನು ಭೇಟಿ ಮಾಡಿ ಎಲ್ಲರ ಸಲಹೆ ಸ್ವೀಕರಿಸಬೇಕು. ಒಂದು ದೇಶಗಳಲ್ಲಿ ಕಾನೂನು, ಮಸೂದೆ ತರಬೇಕಂದ್ರೆ ಚರ್ಚೆ ಆಗಬೇಕು. ಈ ಕಾಯ್ದೆಯಿಂದ ರಾಜ್ಯ ಅಭಿವೃದ್ಧಿ ಆಗುತ್ತಾ. ಕಾಯ್ದೆ ಜಾರಿಗೆ ಇಷ್ಟೊಂದು ಅವಸರ ಯಾಕೆ.? ಕಾಂಗ್ರೆಸ್ ನವರು ನಾಟಕ ಬಿಟ್ಟು ಸರಿಯಾದ ರೀತಿಯಲ್ಲಿ ವಿರೋಧ ಮಾಡಿ. ಆಡಳಿತ ಪಕ್ಷದವರು ಕಾಯ್ದೆಯನ್ನ ಏಕಾಏಕಿ ಜಾರಿಗೆ ತರೋದು ಬೇಡಾ, ಚರ್ಚೆ ಮಾಡಿ ತನ್ನಿ ಎಂದು ಸಲಹೆ ನೀಡಿದರು.
ಈ ಕಾಯ್ದೆಯ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಂದಿತನ ತೋರಿಸುತ್ತಿದ್ದಾರೆ. ಹರಟೆ ಹೊಡಿತ ಕುಳಿತು ಸಭೆಗೆ ಬರುವ ಮುನ್ನ ಕಾಯ್ದೆ ಮಂಡನೆ ಆಗಿತ್ತು. ಆಮೇಲೆ ಬಂದು ನಾಟಕವಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ನಿಮ್ಮ ವೋಟ್ ಬ್ಯಾಂಕ್ ದಲಿತರು. ಮುಸ್ಲಿಂರು, ಹಿಂದುಳಿದವರು. ಇವರ ಪರ ಹೋರಾಟ ಮಾಡುತ್ತಿದ್ದೀರಾ.? ದಲಿತರು ಮತಾಂತರ ಆಗಲೇ ಬಾರದು ಎಂದು ದಿಗ್ಬಂಧನ ಹಾಕುತ್ತಿದ್ದಾರೆ. ಇದು ಯಾವ ನ್ಯಾಯ..? ಎಂದು ಕಿಡಿಕಾರಿದರು.
ಬೆಳಗಾವಿ ಜಿಲ್ಲೆಯ ನಾಯಕರಿಗೆ ಕನ್ನಡಿಗರು ಓಟು ಹಾಕಿಲ್ಲವಾ..? ಎಂಇಎಸ್ ಅನ್ನು ಬ್ಯಾನ್ ಮಾಡಬೇಕು.
ಬೆಳಗಾವಿಯಲ್ಲಿ ದಾಂದಲೆಯಾದ್ರು ಬೆಳಗಾವಿ ಜಿಲ್ಲೆಯ ನಾಯಕರು ಯಾರು ಮಾತನಾಡುತ್ತಿಲ್ಲ. ಇವರಿಗೆ ಕನ್ನಡಿಗರು ಓಟ ಹಾಕಿಲ್ಲವಾ.? ಮರಾಠಿ ಮತದಾರರೆ ಹೆಚ್ಚಾದರಾ.? ರಾಜ್ಯದಲ್ಲಿ ಎಂಇಎಸ್ ಅನ್ನು ಬ್ಯಾನ್ ಮಾಡಬೇಕು. ಕನ್ನಡ ನೀರು ಅನ್ನ ತಿಂದು ಕನ್ನಡ ಬಾವುಟ ಸುಟ್ಟಿದ್ದಾರೆ ಎಂದು ಹೆಚ್.ವಿಶ್ವನಾಥ್ ಕಿಡಿಕಾರಿದರು.
ಅಡ್ಡಂಡ ಕಾರ್ಯಪ್ಪ ನಿರ್ದೇಶಕರು ಆಗಿದ್ದೀರಿ. ಪದ ಪ್ರಯೋಗ ಮಾಡುವಾಗ ಸಾಮರಸ್ಯದಿಂದ ಮಾಡಬೇಕು.
ನಾನು ಕನ್ನಡ ಸಂಸ್ಕೃತಿ ಸಚಿವನಾಗಿದ್ದಾಗ ರಂಗಾಯಣಕ್ಕೆ ರೂಪ ಕೊಟ್ಟಿದ್ದೆ. ರಂಗಾಯಣ ರಿಜಿಸ್ಟ್ರೇಷನ್ ಆಗಿಲ್ಲ ಎಂದು ಕಾರಂತರು ಹೇಳಿದಾಗ ಮೋಯ್ಲಿ ಅವರೊಂದಿಗೆ ಮಾತನಾಡಿ ಕೆಲಸ ಮಾಡಿಸಿದೆವು. ಇಲ್ಲಿಯವರೆಗೆ 10 ಜನ ನಿರ್ದೇಶಕರು ಆಗಿದ್ದಾರೆ. ಯಾರು ಸಹ ತತ್ವ ಸಿದ್ದಂತವನ್ನ ಹೇರಿರಲಿಲ್ಲ. ಅಡ್ಡಂಡ ಕಾರ್ಯಪ್ಪ ನಿರ್ದೇಶಕರು ಆಗಿದ್ದೀರಿ. ಪದ ಪ್ರಯೋಗ ಮಾಡುವಾಗ ಸಾಮರಸ್ಯದಿಂದ ಮಾಡಬೇಕು. ಈ ಹಿಂದಿನ ನಿರ್ದೇಶಕರು ರಂಗಾಯಣವನ್ನು ಕಾಪಾಡಿಕೊಂಡು ಬಂದಿದ್ದಾರೆ. ಗುಂಡೂರಾವ್ ಅವರ ಕಾಲದಲ್ಲಿ ನಿರ್ಮಾಣವಾಗಿದ್ದ ಕಲಾಭವನಕ್ಕೆ ಬೀಗ ಹಾಕಿಬಿಟ್ಟಿದ್ದಾರೆ. ಇದು ಸರಿಯಲ್ಲ. ಅಡ್ಡಂಡ ಕಾರ್ಯಪ್ಪ ಸಾಮರಸ್ಯದಿಂದ ನಡೆದುಕೊಳ್ಳಲಿ ಎಂದು ಹೆಚ್.ವಿಶ್ವನಾಥ್ ಸಲಹೆ ನೀಡಿದರು.
Key words: BJP MLC-H. Vishwanath- Opposition – Conversion Prohibition Act
ENGLISH SUMMARY…
BJP MLC H. Vishwanath opposes anti-conversion bill
Mysuru, December 23, 2021 (www.justkannada.in): BJP MLC H. Vishwanath has opposed the tabling of the anti-conversion bill in the Belagavi Assembly by the state government.
Addressing a press meet in Mysuru today he said, “Basavanna preached equality in the 12th century. He had spoken about equality, irrespective of caste and religion. India is a diversified country. Ambedkar has given us the constitution, according to our constitution, all of us have the liberty to follow any religion or god. Prime Minister Modi has also not spoken about Hindutwa anywhere. All our leaders have preached coexistence. It is unfortunate that the Chief Minister has broken the ‘Manava Dharma’ built by Basavanna, whereas the former’s name is also ‘Basavanna,” he said.
He also expressed his displeasure on the silence of the seers of various maths against the anti-conversion bill.
Keywords: BJP MLC/ H. Vishwanath/ anti-conversion bill/ oppose