BREAKING NOW: ಹೈಕೋರ್ಟ್‌ ನೋಟಿಸ್‌ ಜಾರಿ : ಮೈಸೂರು-ಕೊಡಗು ಸಂಸದ ಯದುವೀರ್‌ ಗೆ ಸಂಕಷ್ಟ..!

The Karnataka High Court on Friday issued notices to Bjp MP Yaduveer Wadiyar and the Election Commission of India (ECI) on a petition seeking to invalidate the election of Yaduveer Wodeyar, who was elected to the Lok Sabha from Mysuru-Kodagu Lok Sabha constituency.

 

ಬೆಂಗಳೂರು, ಜ. ೨೪, ೨೦೨೫: (www.justkannada.in news) ಬಿಜೆಪಿಯಿಂದ ಸ್ಪರ್ಧಿಸಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿರುವ ಯದುವೀರ್ ಒಡೆಯರ್ ಅವರ ಆಯ್ಕೆ ಅಸಿಂಧುಗೊಳಿಸಿ ಎಂದು ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಸಂಸದ ಯದುವೀರ್‌ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಎಸ್ಪಿ ಪಕ್ಷದಿಂದ ಸ್ಪರ್ಧಿಸಿದ್ದ ತಮ್ಮ ನಾಮಪತ್ರವನ್ನು ಚುನಾವಣಾ ಆಯೋಗ‌ ತಿರಸ್ಕರಿಸುವುಕ್ಕೆ ಆಕ್ಷೇಪಿಸಿ ಬಹುಜನ ಸಮಾಜವಾದಿ ಪಕ್ಷದ ರೇವತಿ ರಾಜ್‌ ಅಲಿಯಾಸ್‌ ಭೀಮಪುತ್ರಿ ರೇವತಿ ರಾಜ್ ಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದರು.  ನ್ಯಾಯಮೂರ್ತಿ ಎಸ್‌ ಜಿ ಪಂಡಿತ್‌ ಅವರ ಏಕಸದಸ್ಯ ಪೀಠ ಇಂದು ಈ ಅರ್ಜಿ ವಿಚಾರಣೆ ನಡೆಸಿ,  ಪ್ರತಿವಾದಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ಏನಿದು ಹಿನ್ನೆಲೆ:

revathi raj, BSP

2024ರ ಏಪ್ರಿಲ್ 4ರಂದು ಆಯೋಗಕ್ಕೆ ನಾಮಪತ್ರ ಸಲ್ಲಿಸಲಾಗಿತ್ತು. ಆದರೆ, ನಾಮಪತ್ರದ ಕಲಂ 7, 7(ಎ), 7(ಎ)(ಬಿ) ಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಲ್ಲ. ಆದ ಕಾರಣ ಏಪ್ರಿಲ್ 5ರ ಬೆಳಿಗ್ಗೆ 11 ಗಂಟೆಯ ಒಳಗಾಗಿ ಸರಿಯಾಗಿ ಭರ್ತಿ ಮಾಡಿ ನಾಮಪತ್ರ ಸಲ್ಲಿಸಬೇಕು ಎಂದು ಬಿಎಸ್ಪಿ ಅಭ್ಯರ್ಥಿಯಾಗಿದ್ದ ರೇವತಿ ರಾಜ್‌ ಅವರಿಗೆ ಚುನಾವಣಾಧಿಕಾರಿ ಸೂಚಿಸಿದ್ದರು.

ಸೂಕ್ತ ಸಮಯದಲ್ಲಿ ನಾಮಪತ್ರ ಸಲ್ಲಿದ್ದರೂ ತಮ್ಮ ನಾಮಪತ್ರ ತಿರಸ್ಕರಿಸಲಾಗಿದೆ. ಈ ಸಂಬಂಧ ರಾಜ್ಯ ಮಖ್ಯ ಚುನಾವಣಾ ಆಯುಕ್ತರಿಗೆ ಪತ್ರದ ಮೂಲಕ ದೂರು ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ರೇವತಿ ರಾಜ್‌ ಕೋರ್ಟ್‌ ಮೊರೆ ಹೋಗಿದ್ದರು.

ತಮ್ಮ ನಾಮಪತ್ರ ತಿರಸ್ಕರಿಸಿದ್ದ ಅಂದಿನ ಚುನಾವಣಾಧಿಕಾರಿ/ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಅವರ ಆದೇಶವನ್ನು ಬದಿಗೆ ಸರಿಸಬೇಕು. ಯದುವೀರ್‌ ಆಯ್ಕೆ ಅಸಿಂಧುಗೊಳಿಸಿ, ಭಾರತೀಯ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಹೊಸದಾಗಿ ಚುನಾವಣೆ ನಡೆಸಲು ಆದೇಶಿಸಬೇಕು ಎಂದು ಅರ್ಜಿಯಲ್ಲಿ ರೇವತಿರಾಜ್‌ ಕೋರಿದ್ದಾರೆ.

key words: HIGH COURT, NOTICE, MYSURU-KODAGU, BJP MP YADUVEER

SUMMARY:

BREAKING NOW: HIGH COURT ISSUES NOTICE TO MYSURU-KODAGU MP YADUVEER

The Karnataka High Court on Friday issued notices to Bjp MP Yaduveer Wadiyar and the Election Commission of India (ECI) on a petition seeking to invalidate the election of Yaduveer Wodeyar, who was elected to the Lok Sabha from Mysuru-Kodagu Lok Sabha constituency.

Revathi Raj alias Bheemaputri of the Bahujan Samaj Party had filed a petition in the court challenging the Election Commission’s rejection of her nomination papers from Mysuru-Kodagu Lok Sabha constituency in the last Lok Sabha elections.