ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಪುನರ್ ರಚನೆ:  ಮಾಜಿ ಸಿಎಂ ಬಿಎಸ್ ವೈಗೆ ಸ್ಥಾನ.

ನವದೆಹಲಿ,ಆಗಸ್ಟ್,17,2022(www.justkannada.in): ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಸ್ಥಾನ ನೀಡಲಾಗಿದೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆ ನಿಟ್ಟಿನಲ್ಲಿ ಮಾಜಿ ಸಿಎಂ ಬಿಎಸ್ ವೈಗೆ ಬಿಜೆಪಿ ಹೈಕಮಾಂಡ್ ಮತ್ತೆ ಮಣೆ ಹಾಕಿದೆ.

ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯ ಪುನರ್ ರಚನೆಯಾಗಿದ್ದು,  ಹೊಸ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬಿ.ಎಸ್.ಯಡಿಯೂರಪ್ಪಗೆ ಸ್ಥಾನ ಲಭಿಸಿದೆ. ಈ ಸಮಿತಿಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಶಿವರಾಜ್ ಚೌಹಾಣ್ ಅವರ ಹೆಸರನ್ನ ಕೈಬಿಡಲಾಗಿದ್ದು,  ಬಿಎಸ್ ವೈ ಜೊತೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ  ಬಿಎಲ್ ಸಂತೋಷ್ ಅವರಿಗೂ ಸ್ಥಾನ ನೀಡಲಾಗಿದೆ.

ಬಿಜೆಪಿ ಸಂಸದೀಯ ಮಂಡಳಿಯಲ್ಲಿರುವ ಇತರ ಸದಸ್ಯರೆಂದರೆ ಜೆಪಿ ನಡ್ಡಾ, ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ಕೆ. ಲಕ್ಷ್ಮಣ್, ಇಕ್ಬಾಲ್ ಸಿಂಗ್ ಲಾಲ್ ಪುರ, ಸುಧಾ ಯಾದವ್, ಸತ್ಯ ನಾರಾಯಣ್ ಜತಿಯಾ ಮತ್ತು ಸರ್ಬಾನಂದ ಸೋನೋವಾಲ್ ಅವರಿಗೆ ಸ್ಥಾನ ನೀಡಲಾಗಿದೆ.

ಈ ಹಿಂದೆ ಕರ್ನಾಟಕದ ಅನಂತ ಕುಮಾರ್ ಸಂಸದೀಯ ಮಂಡಳಿಯ ಸದಸ್ಯರಾಗಿದ್ದರು. ಬಿಜೆಪಿಯಲ್ಲಿ ನೀತಿ ತೀರ್ಮಾನ ಕೈಗೊಳ್ಳುವ ಉನ್ನತ ಸಮಿತಿಯೇ ಬಿಜೆಪಿ ಸಂಸದೀಯ ಮಂಡಳಿ.

Key words: BJP –National- Parliamentary- Board-former CM- B.S.Yeddyurappa

ENGLISH SUMMARY…

BJP National Parliamentary Committee reformed: Former CM BSY inducted
New Delhi, August 17, 2022 (www.justkannada.in): Former Chief Minister B.S. Yediyurappa has been inducted into the BJP National Parliamentary Committee. Thus, the BJP high command appears to have once again given priority to BSY as the elections are nearing.
The BJP National Parliamentary Committee has been reformed. The names of Union Ministers Nitin Gadkari and Shivaraj Chowan have been omitted. Along with BSY, B.L Santosh has been included as the BJP National Organizing General Secretary.
Other members of the committee include J.P. Nadda, Narendra Modi, Rajnath Singh, Amith Shah, K. Lakshman, Iqbal Singh Lalpura, Sudha Yadav, Satyanarayana Jatiya, and Sarbanand Sonowal.
Keywords: BJP/ National Parliamentary Committee/ reformed/ BSY/ inducted