ಬೆಂಗಳೂರು,ಡಿಸೆಂಬರ್,2,2024 (www.justkannada.in): ರಾಜ್ಯ ಬಿಜೆಪಿ ಬಣ ರಾಜಕಾರಣ ತೀವ್ರವಾದ ಬೆನ್ನೆಲ್ಲೆ ಎಚ್ಚೆತ್ತುಕೊಂಡ ಬಿಜೆಪಿ ಹೈಕಮಾಂಡ್ ಬಿಜೆಪಿ ಶಿಸ್ತು ಸಮಿತಿಯು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಶೋಕಾಸ್ ನೋಟಿಸ್ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಿಸ್ತು ಸಮಿತಿ ನೋಟಿಸ್ ಗೆ ಉತ್ತರ ನೀಡುತ್ತೇನೆ. ರಾಜ್ಯದ ವಾಸ್ತವ ಸ್ಥಿತಿ ಮನದಟ್ಟು ಮಾಡುತ್ತೇನೆ. ಹಿಂದುತ್ವದ ಪರ ನನ್ನ ಹೋರಾಟ ಮುಂದುರೆಯುತ್ತದೆ. ವಕ್ಫ್ ಭ್ರಷ್ಟಾಚಾರದ ವಿರುದ್ದ ಹೋರಾಟ ಮುಂದುವರೆಸುವೆ ಕುಟುಂಬ ರಾಜಕಾರಣದ ವಿರುದ್ದ ನನ್ನ ಹೋರಾಟ ನಿರಂತರ ಎಂದು ಟ್ವೀಟ್ ಮಾಡಿದ್ದಾರೆ.
Key words: BJP, notice, MLA, Basanagowda patil Yatnal