ಬಿಜೆಪಿ ಪಾದಯಾತ್ರೆಯಲ್ಲಿ ಜನರ ಹಿತ ಇಲ್ಲ: ಮೈಸೂರು ಬದಲು ದೆಹಲಿ ಚಲೋ ಮಾಡಬೇಕಿತ್ತು- ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಬೆಂಗಳೂರು,ಆಗಸ್ಟ್,10,2024 (www.justkannada.in):  ಬಿಜೆಪಿ ಜೆಡಿಎಸ್ ಮಾಡಿದ ಪಾದಯಾತ್ರೆಯಲ್ಲಿ ಜನರ ಹಿತವಿಲ್ಲ. ಅವರು ಮೈಸೂರು ಚಲೋ ಬದಲು ದೆಹಲಿ ಚಲೋ ಮಾಡಬೇಕಿತ್ತು ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ವಿಜಯೇಂದ್ರ ಲಾಂಚ್ ಮಾಡಲು ಪಾದಯಾತ್ರೆ ಮಾಡಿದ್ದಾರೆ. ಅಪ್ಪ ಮಕ್ಕಳ ಪಕ್ಷ ಸರ್ವನಾಶ ಮಾಡ್ತೇವೆ ಎಂದು ಬಿಎಸ್ ವೈ ಹೇಳಿದ್ದರು. ಹಾಗೆಯೇ ಬಿಎಸ್ ವೈರನ್ನ ಹೆಚ್ ಡಿ ಕುಮಾರಸ್ವಾಮಿ ದುರ್ಯೋದನ  ಅಂದಿದ್ದರು. ಈಗ ಒಟ್ಟಿಗೆ ಇದ್ದಾರೆ ಎಂದು ಟೀಕಿಸಿದರು.

ಜನಾಂದೋಲನ  ಅಂದರೆ ಸಂವಿಧಾನದ ಸಂರಕ್ಷಣೆ ಮಾಡುವುದು. ನಾವೇನು ಅಪರೇಷನ್ ಹಸ್ತ ಮಾಡಿ ಅಧಕಾರಕ್ಕೆ ಬಂದಿದ್ದೇವಾ ? ಅವರು ಸರ್ಕಾರ ಬೀಳಿಸಲು ಯತ್ನಿಸುತ್ತಿದ್ದಾರೆ ರಾಜ್ಯಪಾಲರ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಸಂವಿಧಾನ ಹುದ್ದೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದು ಸಿಎಂ ಪರ ಹೋರಾಟವಲ್ಲ ಸಂವಿಧಾನ ರಕ್ಷಣೆಗೆ  ಹೋರಾಟ ಎಂದರು.

ತರಾತುರಿಯಲ್ಲಿ ಸಿಎಂಗೆ ರಾಜ್ಯಪಾಲರು ನೋಟಿಸ್ ಕೊಟ್ಟಿದ್ದಾರೆ. ದೂರು ಕೊಟ್ಟಿದ್ದು ಯಾರು  ಅವರ ಹಿನ್ನೆಲೆ ಏನು ಎಂದು ಪರಿಶೀಲಿಸಿಲ್ಲ.  ಬಿಜೆಪಿಯಲ್ಲೆ ಇರುವ ನಾಯಕರು ವಿಜಯೇಂದ್ರ ನಾಯಕತ್ವ ಒಪ್ಪಿಲ್ಲ ಯತ್ನಾಳ್ , ಕೆಎಸ್ ಈಶ್ವರಪ್ಪ ಒಪ್ಪಿಲ್ಲ ಎಂದು ಲೇವಡಿ ಮಾಡಿದರು.

Key words: BJP, padayatra, mysore, minister, Priyank Kharge