ಬೆಂಗಳೂರು, ಜುಲೈ 28,2019(www.justkannada.in): ‘ಸ್ಪೀಕರ್ ವಿರುದ್ಧ’ವೇ ಸೋಮವಾರದ ಅಧಿವೇಶನದಲ್ಲಿ ‘ಅವಿಶ್ವಾಸ’ ನಿರ್ಣಯ ಮಂಡಿಸುವ ಸಾಧ್ಯತೆ ಇದೆ.
ನಾಳೆ ವಿಧಾನಮಂಡಲದ ಹಣಕಾಸು ಮಸೂದೆ ಮಂಡನೆಯ ಅಧಿವೇಶನ ಆರಂಭವಾಗಲಿದೆ. ಸೋಮವಾರ ಆರಂಭಗೊಳ್ಳಲಿರುವ ಕಲಾಪದಲ್ಲಿ, ಬಿಜೆಪಿ ತಮ್ಮ ಬಹುಮತ ಸಾಬೀತು ಪಡಿಸುವ ಪ್ರಕ್ರಿಯೆ ನಡೆಯಲಿದೆ.
ಬಹುಮತ ಸಾಬೀತು ಪಡಿಸುವ ಪ್ರಕ್ರಿಯೆ ಮುಗಿಯುತ್ತಿದ್ದರೇ, ಸಭಾಧ್ಯಕ್ಷರು ರಾಜೀನಾಮೆ ಕೊಡಬಹುದು. ಇಲ್ಲವೇ ಕೊಡದೇ ಇದ್ದಾಗ ಆಡಳಿತಾರೂಢ ಬಿಜೆಪಿ ಪಕ್ಷ, ಸ್ಪೀಕರ್ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ, ಸಭಾಧ್ಯಕ್ಷ ಸ್ಥಾನದಲ್ಲಿದ್ದರೂ ಪ್ರಮುಖ ನಿರ್ಣಯವನ್ನು ಸ್ಪೀಕರ್ ಕೈಗೊಳ್ಳುವುದಕ್ಕೆ ತಡೆ ಹಾಕುವ ಚಿಂತನೆ ನಡೆಸಿದೆ ಎನ್ನಲಾಗಿದೆ.