ಮೈಸೂರು,ಮಾರ್ಚ್,18,2023(www.justkannada.in): ಮತ್ತೆ ಏನಾದರೂ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿ.ಎಲ್ ಸಂತೋಷ್ ಅಥವಾ ಪ್ರಹ್ಲಾದ್ ಜೋಶಿ ಸಿಎಂ ಆಗ್ತಾರೆ ಹೊರತು ಲಿಂಗಾಯತರಿಗೆ ಬಿಟ್ಟಕೊಡಲ್ಲ. ಇದನ್ನ ಲಿಂಗಾಯಿತ ಸಮುದಾಯ ಅರ್ಥಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ಮೈಸೂರಿನಲ್ಲಿ ಇಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು. ಶಾಸಕ ಸಿಟಿ ರವಿ ವೀರಶೈವ ಲಿಂಗಾಯತ ವಿರುದ್ಧ ಮಾತನಾಡಿರುವ ಆಡಿಯೋ ವೈರಲ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ವೀರಶೈವ ಲಿಂಗಾಯತ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಯನ್ನ ಕಟ್ಟಿ ಬೆಳಿಸಿದ ಯಡಿಯೂರಪ್ಪ ಅವರನ್ನ ಮೂಲೆ ಗುಂಪು ಮಾಡಿದೆ. ಅವರಿಗೆ ಇಂಜೆಕ್ಷನ್ ಕೊಟ್ಟು ಎರಡೇ ಮಾತನಾಡಬೇಕು ಹಾಗೇ ಮಾಡಿದೆ. ಅವರನ್ನು ಗನ್ ಪಾಯಿಂಟ್ ನಲ್ಲಿಟ್ಟಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಮತ್ತೆ ಏನಾದರೂ ಅಧಿಕಾರಕ್ಕೆ ಬಂದರೆ ಬಿ.ಎಲ್ ಸಂತೋಷ್ ಅಥವಾ ಪ್ರಹ್ಲಾದ್ ಜೋಷಿ ಸಿಎಂ ಆಗ್ತಾರೆ ಹೊರತು ಲಿಂಗಾಯತರಿಗೆ ಬಿಟ್ಟಕೊಡಲ್ಲ. ಇದರ ಬಗ್ಗೆ ಮೈಸೂರಿನಲ್ಲಿ ಬಿಎಲ್ ಸಂತೋಷ್ ರಾಜೇಂದ್ರ ಭವನದಲ್ಲಿ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಲಿಂಗಾಯತ ಸಮುದಾಯಕ್ಕೆ ಬಿಟ್ಟುಕೊಡಲ್ಲ. ಲಿಂಗಾಯತ ಸಮುದಾಯ ಇದನ್ನ ಅರ್ಥ ಮಾಡಿಕೊಳ್ಳಬೇಕು. ಲಿಂಗಾಯತ ಸಮುದಾಯವನ್ನು ಮೂಲೆ ಗುಂಪು ಮಾಡಲು ಬಿಜೆಪಿಯ ಮುಖಂಡರು ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಧ್ರುವನಾರಾಯಣ್ ಸಾವು ಕಾಂಗ್ರೆಸ್ ಪಕ್ಷದ ಒತ್ತಡದಿಂದ ಎಂದಿದ್ದ ಛಲವಾದಿ ನಾರಾಣಸ್ವಾಮಿ ವಿರುದ್ಧ ಎಂ. ಲಕ್ಷ್ಮಣ್ ವಾಗ್ದಾಳಿ.
ಧ್ರುವನಾರಾಯಣ್ ಸಾವು ಕಾಂಗ್ರೆಸ್ ಪಕ್ಷದ ಒತ್ತಡದಿಂದ ಆಗಿದ್ದು ಎಂದು ಹೇಳಿಕೆ ಕೊಟ್ಟಿದ್ದ ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಗುಡುಗಿದ ಎಂ.ಲಕ್ಷ್ಮಣ್, ಛಲವಾದಿ ಎಂದು ಹೆಸರು ಇಟ್ಟುಕೊಂಡಿದ್ದೀಯಲ್ಲಪ್ಪಾ ನಿನಗೆ ಮಾನ ಮರ್ಯಾದೆ ಇದಿಯಾ. ಕಾಂಗ್ರೆಸ್ ಪಕ್ಷದಿಂದ ಎಲ್ಲವನ್ನೂ ಪಡೆದುಕೊಂಡು ಹೋಗಿ ಈಗ ಅವರಿಗೆ ದ್ರೋಹ ಮಾಡುವ ಕೆಲಸ ಮಾಡುತ್ತಿದ್ದೀರಾ.? ನಿಮಗೆ ಬಿಜೆಪಿ ಅವರ ಚೆಡ್ಡಿ ಹೊತ್ತುಕೊಂಡು ಹೋಗುವ ಕೆಲಸ ಕೊಟ್ಟಿದ್ರು. ಮುಂದೆ ಅವರ ಅಂಡರ್ ವೇರ್ ತೊಳೆಯುವ ಕೆಲಸ ಕೊಡುತ್ತಾರೆ ಅಷ್ಟೇ ನಿನಗೆ. ಸಿದ್ದರಾಮಯ್ಯ, ಎಚ್ ಸಿ ಮಹಾದೇವಪ್ಪ ಅವರ ಬಗ್ಗೆ ಧ್ರುವನಾರಾಯಣ್ ಬಗ್ಗೆ ಹಗುರವಾಗಿ ಮಾತನಾಡುತ್ತೀರಾ.? ನಮ್ಮ ಪಕ್ಕದಲ್ಲಿರುವ ದಲಿತ ಸಮುದಾಯದವರಿಗೆ ಕೇಳಿಕೊಳ್ಳುತ್ತೇನೆ ಇಂತವರಿಗೆ ಜನ ಕಲ್ಲು ತೆಗೆದುಕೊಂಡು ಹೊಡಿಬೇಕು ಎಂದು ವಾಗ್ದಾಳಿ ನಡೆಸಿದರು.
ದಲಿತ ಮುಖ್ಯಮಂತ್ರಿಗಳಾಗದಿದ್ರು ಕೂಡ ದಲಿತರಿಗೆ ಕೊಡದಷ್ಟು ಯೋಜನೆಗಳನ್ನ ಸಿದ್ದರಾಮಯ್ಯ ಕೊಟ್ಟಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವನು ನನ್ನನ್ನ ಯಾರೂ ಪ್ರಶ್ನೆ ಮಾಡಲ್ಲ ಅಂತ ಬಾಯಿಗೆ ಬಂದಹಾಗೆ ಮಾತಾಡ್ತಿರಾ.? ಬನ್ನಿ ನಾನು ನೀವು ಮುಕ್ತ ಚರ್ಚೆಗೆ ಕೂರೋಣ ಚರ್ಚೆ ಮಾಡೋಣ ಎಂಧು ಸವಾಲು ಹಾಕಿದರು.
ಉರಿಗೌಡ ಮತ್ತು ನಂಜೇಗೌಡ ವಿಚಾರ ಕುರಿತು ಮಾತನಾಡಿದ ಕಾಂಗ್ರೆಸ್ ವಕ್ತಾರ ಲಕ್ಷಣ್, ಇದು ಬಿಜೆಪಿಯವರ ಕುತಂತ್ರ. ಒಕ್ಕಲಿಗರು ಮತ್ತು ಮುಸ್ಲಿಮರ ನಡುವೆ ದ್ವೇಷ ಮನೋಭಾವನೆ ಬಿತ್ತುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಕೂಡಲೇ ಸಚಿವ ಅಶ್ವಥ್ ನಾರಾಯಣ ಮತ್ತು ಸಿಟಿ ರವಿ ಹಾಗೂ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಗ್ಯಾರೆಂಟಿ ಕಾರ್ಡನ್ನ ಮನೆ ಮನೆಗೆ ತಲುಪಿಸುವ ಕೆಲಸವನ್ನ ನಮ್ಮ ಕಾರ್ಯಕರ್ತರು ಮಾಡುತ್ತಿದ್ದರೆ ಅದನ್ನ ತಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಪೋಲಿಸ್ ಇಲಾಖೆ ಬಿಜೆಪಿ ಏಜೆಂಟಾಗಿ ಕೆಲಸ ಮಾಡುತ್ತಿದೆ. ಹಂಚಬೇಡಿ ಅನ್ನೋದಕ್ಕೆ ನಿಮಗೆ ಅಧಿಕಾರ ಇಲ್ಲ.ಬಿಜೆಪಿಯವರು ಸೀರೆ ಹಂಚಿಕೆ ಮಾಡುತ್ತಾರಲ್ಲ ಅದನ್ನ ಹಿಡಿಯಿರಿ, ಯುಗಾದಿ ಹಬ್ಬದ ಪ್ರಯುಕ್ತ ಜನರಿಗೆ ಹಬ್ಬದ ಉಡುಗೊರೆ ಹಂಚುತ್ತಾರಲ್ಲ ಅದನ್ನ ತಡೆಯಿರಿ. ಬಿಜೆಪಿ ಅವರ ಏಜೆನ್ಸಿಯಾಗಿ ಕೆಲಸ ಮಾಡಬೇಡಿ. ಮುಂದಿನ ದಿನಗಳಲ್ಲಿ ಪೋಲಿಸರ ವಿರುದ್ಧ ಪ್ರತಿಭಟನೆಗೆ ಇಳಿಯಬೇಕಾಗುತ್ತೆ ಎಂದು ಪೊಲೀಸರಿಗೆ ಎಂ. ಲಕ್ಷಣ್ ಎಚ್ಚರಿಕೆ ನೀಡಿದರು.
Key words: BJP – power- again -BL Santosh – Joshi –CM- Lingayats – KPCC –spokesperson-M. Laxman.