ಬೆಂಗಳೂರು, ಜೂ. 21,2019(www.justkannada.in): ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಆಗಲು ಬಿಡಲ್ಲ. ಅವರು ಯೋಗ್ಯತೆ ಇದ್ರೆ ಆಡಳಿತ ನಡೆಸಲಿ. ಇಲ್ಲದಿದ್ರೆ ಬಿಟ್ಟು ಹೋಗಲಿ. ನಾವು ಆಡಳಿತ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸಮ್ಮಿಶ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಮಧ್ಯಂತರ ಚುನಾವಣೆ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ನೀಡಿದ ಹೇಳಿಕೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಒಂದು ಕಡೆ ಕಾಂಗ್ರೆಸ್ನವರು ಮಧ್ಯಂತರ ಚ್ಠುನಾವಣೆ ಬೇಡ ಎನ್ನುತ್ತಾರೆ. ಜೆಡಿಎಸ್ ನವರು ಮಧ್ಯಂತರ ಚುನಾವಣೆ ಬೇಕು ಎಂದಿದ್ದಾರೆ. ಒಟ್ಟಾರೆ ಸಮ್ಮಿಶ್ರ ಸರ್ಕಾರವೇ ಗೊಂದಲದಲ್ಲಿ ಮುಳುಗಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ನಿಂತು ಹೋಗಿವೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದರೇ ಜನರಿಗೆ ಹೊರೆಯಾಗುತ್ತದೆ. ಹೀಗಾಗಿ ಮಧ್ಯಂತರ ಚುನಾವಣೆ ನಡೆಯಲು ಬಿಡುವುದಿಲ್ಲ. ನಾವು 105 ಶಾಸಕರಿದ್ದೇವೆ. ಆಡಳಿತ ನಡೆಸಲು ಯೋಗ್ಯತೆ ಇದ್ದರೇ ನಡೆಸಲಿ ಇಲ್ಲದಿದ್ರೆ ಬಿಟ್ಟು ಹೋಗಲಿ ನಾವೇ ಆಡಳಿತ ನಡೆಸುತ್ತೇವೆ. ಸರ್ಕಾರ ತನ್ನ ಪ್ರಮಾದಗಳಿಂದಲೇ ಬಿದ್ದು ಹೋದರೆ ಬಿಜೆಪಿ ಏನು ಮಾಡಬೇಕು ಎಂಬುದನ್ನು ನಂತರ ತೀರ್ಮಾನಿಸುತ್ತೇವೆ ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದರು.
key words: bjp –president– BS Yeddyurappa sparks- against- alliance government