ಶಾಸಕರ ವಿರುದ್ದ FIR ದಾಖಲಿಸುವವರೆಗೆ ವಿನಯ್ ಅಂತ್ಯಕ್ರಿಯೆ ಇಲ್ಲ- ಬಿಜೆಪಿ ನಾಯಕರ ಬಿಗಿಪಟ್ಟು

ಕೊಡಗು,ಏಪ್ರಿಲ್,5,2025 (www.justkannada.in): ಬಿಜೆಪಿ ಕಾರ್ಯಕರ್ತ ವಿನಯ್ ಸೋಮಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ಎ.ಎಸ್ ಪೊನ್ನಣ್ಣ, ಮಂತರ್ ಗೌಡ ವಿರುದ್ದ ಎಫ್ ಐಆರ್ ದಾಖಲಿಸಲು ಆಗ್ರಹಿಸಿ ಕುಶಾಲನಗರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ.

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ ಭಾಗಿಯಾಗಿದ್ದಾರೆ.

ಈ ವೇಳೆ ಮಾತನಾಡಿರುವ  ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಶಾಸಕರ ವಿರುದ್ದ ಎಫ್ ಐಆರ್ ದಾಖಲಿಸುವವರೆಗೆ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅಂತ್ಯಕ್ರಿಯೆ ಮಾಡಲ್ಲ ಎಷ್ಟು ಹೊತ್ತಾದ್ರೂ ಇಲ್ಲಿಯೇ ಕಾಯುತ್ತೇವೆ. ಕಾರ್ಯಕರ್ತನ ಸಾವನ್ನ ಹಗುರವಾಗಿ ಪರಿಗಣಿಸಬೇಡಿ.  ಎಫ್ ಐಆರ್ ನಲ್ಲಿ ಇಬ್ಬರು ಶಾಸಕರ ಹೆಸರನ್ನ ಸೇರಿಸಿ ಎಂದು ಆಗ್ರಹಿಸಿದರು.

ಕಾಮಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಯಂತೆ ಕೆಲಸ  ಮಾಡುತ್ತಿವೆ ಎಂದು ಬಿವೈ ವಿಜಯೇಂದ್ರ ಕಿಡಿಕಾರಿದರು.

Key words: Vinay, funeral, FIR,  MLA, Ponnanna, BJP leaders