Home Front Page ತುರ್ತು ಪರಿಸ್ಥಿತಿ ಜಾರಿಯಾಗಿ 50 ವರ್ಷ: ಕಾಂಗ್ರೆಸ್ ವಿರುದ್ದ ಪೋಸ್ಟರ್ ಅಂಟಿಸಿ ಬಿಜೆಪಿ ಪ್ರತಿಭಟನೆ

ತುರ್ತು ಪರಿಸ್ಥಿತಿ ಜಾರಿಯಾಗಿ 50 ವರ್ಷ: ಕಾಂಗ್ರೆಸ್ ವಿರುದ್ದ ಪೋಸ್ಟರ್ ಅಂಟಿಸಿ ಬಿಜೆಪಿ ಪ್ರತಿಭಟನೆ

ಬೆಂಗಳೂರು,ಜೂನ್,24,2024 (www.justkannada.in):  ನಾಳೆಗೆ ತುರ್ತು ಪರಿಸ್ಥಿತಿ ಜಾರಿಯಾಗಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ದ ಪೋಸ್ಟರ್ ಅಂಟಿಸುವ ಮೂಲಕ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.

ತುರ್ತು ಪರಿಸ್ಥಿತಿ ಜಾರಿಯಾಗಿ 50 ವರ್ಷ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭವನಕ್ಕೆ ಪೋಸ್ಟರ್  ಅಂಟಿಸುವ ಮೂಲಕ ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾದರು. ಈ ವೇಳೆ ಪೊಲೀಸರು ಬಿಜೆಪಿ ನಾಯಕರನ್ನ ವಶಕ್ಕೆ ಪಡೆದರು.

ಈ ವೇಳೆ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ತುರ್ತು ಪರಿಸ್ಥಿತಿ ವೇಳೆ ನಾನು ಜೈಲಿಗೆ ಹೋಗಿದ್ದೆ.  ಒಂದು ತಿಂಗಳು ಜೈಲಿನಲ್ಲಿದ್ದೆ. ನಮಗೆ ಚಿತ್ರಹಿಂಸೆ ನೀಡಿದ್ದರು.  ನಮಗ ಸರಿಯಾಗಿ ಊಟವೂ ಕೊಡುತ್ತಿರಲಿಲ್ಲ.  ಸರ್ವಾಧಿಕಾರಿ ಪ್ರವೃತ್ತಿ ತೋರಿದವರು ಇಂದಿರಾಗಾಂಧಿ. ಜನಕ್ಕೆ ಮೋಸಮಾಡಿದ ಕಾಂಗ್ರೆಸ್ ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದರು.

Key words: BJP, protests, posters, against, Congress